Friday, January 21, 2022

ಪಾದಯಾತ್ರೆ ಸೆಡ್ಡು ಹೊಡೆಯಲು ಬಿಜೆಪಿಗೆ ಕಂಟಕವಾದ ಕೊರೊನಾ: ಸಿಎಂ ಸಿಟಿ ರೌಂಡ್ಸ್​ ರದ್ದು

Must read

ಬೆಂಗಳೂರು: ಕಾಂಗ್ರೆಸ್​ ಪಾದಯಾತ್ರೆ ದಿನದಿಂದ ದಿನಕ್ಕೆ ಹೈಪ್​ ಪಡೆದುಕೊಳ್ಳುತ್ತಿದೆ. ಮೇಕೆದಾಟು ಯೋಜನೆ ಹೆಸರಲ್ಲಿ ಪಾದಯಾತ್ರೆ ಮಾಡಿ ಕಾಂಗ್ರೆಸ್​ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ ಎಂದು ಆರೋಪಿಸುತ್ತಿರು ಬಿಜೆಪಿ, ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಇಂದು ಸಿಟಿ ರೌಂಡ್ಸ್​​ ಹಮ್ಮಿಕೊಂಡಿದ್ದರು. ಆದರೆ ನಿನ್ನೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಸಿಟಿ ರೌಂಡ್ಸ್​ ರದ್ದಾಗಿದೆ.

ಕಾಂಗ್ರೆಸ್ ಪಾದಯಾತ್ರೆ ಗಮನ ಬೇರೆಡೆ ಸೆಳೆಯಲು ಸಿಎಂ ಬೊಮ್ಮಾಯಿ ಪ್ಲಾನ್ ಮಾಡಿದ್ದು, 9 ವಿಧಾನಸಭಾ ಕ್ಷೇತ್ರಗಳನ್ನು ರೌಂಡ್ ಹಾಕಲು ನಿರ್ಧಾರ ಮಾಡಿದ್ದರು.

ಗೋವಿಂದರಾಜನಗರ, ಬೊಮ್ಮನಹಳ್ಳಿ, ಯಶವಂತಪುರ, ಮಲ್ಲೇಶ್ವರ, ಕೆ.ಆರ್ ಪುರ, ಮಹದೇವಪುರ, ಬಸವನಗುಡಿ, ಚಿಕ್ಕಪೇಟೆ, ಸಿವಿ ರಾಮನ್ ನಗರ ಕ್ಷೇತ್ರಗಳಲ್ಲಿ ಸಿಎಂ ಸಿಟಿ ರೌಂಡ್ಸ್​​ ಕಾರ್ಯಕ್ರಮ ನಿಗದಿಯಾಗಿತ್ತು. ಸದ್ಯ ತಾತ್ಕಾಲಿಕವಾಗಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

Latest article