Monday, November 29, 2021

ಪ್ರವಾಸದ ಉದ್ದೇಶವೇನಾಗಿತ್ತು ಮಾನ್ಯ ಮುಖ್ಯಮಂತ್ರಿಗಳೇ..?

Must read

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ದಿಢೀರ್‌ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ರಾಜಕೀಯ ವಲಯದಲ್ಲಿ ಇದು ಗಂಭೀರ ಚರ್ಚೆಗೆ ಕಾರಣವಾಯಿತು. ಬೊಮ್ಮಾಯಿಯವರು ಬೆಂಗಳೂರಿಗೆ ವಾಪಸ್​ ಮರಳಿದ ನಂತರ ತಮ್ಮ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರ.

ಆದರೆ, ಸದ್ಯಕ್ಕೆ ಕಾಡುತ್ತಿರುವ ಪ್ರಮುಖ ಪ್ರಶ್ನೆಗಳೆಂದರೆ.

ಅಸಲಿಗೆ ​ಬಸವರಾಜ ಬೊಮ್ಮಾಯಿಯವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾದರೂ ಏಕೆ..?

ರಾಜ್ಯದ ಸಮಸ್ಯೆಗಳನ್ನು ಚರ್ಚಿಸಲೋ ಅಥವಾ ರಾಜ್ಯದ ಜಿಎಸ್​ಟಿ ಪಾಲು ಭರಿಸುವಂತೆ ಕೇಳಿಕೊಳ್ಳಲೋ..?

ಇಲ್ಲವೇ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿದ ರಾಜ್ಯಕ್ಕೆ ಸಹಾಯ ಕೇಳಲೋ..?

ಸಾವಿರಾರು ಕೋಟಿಯ ಹಗರಣವಾಗಿರುವ ಬಿಟ್ ಕಾಯಿನ್ ಆರೋಪ ನಿರ್ಲಕ್ಷಿಸಲು ಪ್ರಧಾನಿ ಸಲಹೆ ನೀಡಿದರು ಎಂದರೆ ಈ ಭೇಟಿಯ ಉದ್ದೇಶವಾದರೂ ಏನು..? ಎನ್ನುವ ಪ್ರಶ್ನೆ ಕಾಡತೊಡಗಿದೆ. ಏಕಂದರೆ ಬೊಮ್ಮಾಯಿಯವರು ಇಂದು ರಾಜ್ಯಕ್ಕೆ ಮರಳಿದ ನಂತರ ತಮ್ಮ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಕೆಟಿಪಿಪಿ ಕಾಯ್ದೆ ತಿದ್ದುಪಡಿ ಕುರಿತು ಮಾಹಿತಿಯನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಂಡು ಅನುಷ್ಠಾನಗೊಳಿಸಲು ಪ್ರಧಾನಿ ಸಲಹೆ ಬಗ್ಗೆ ಮಾತನಾಡಿದ ಬೊಮ್ಮಾಯಿ ಸರ್ಕಾರ, ಈ ಕಾಯ್ದೆಯ ತಿದ್ದುಪಡಿಗೆ ಎಜಿ, ಹಣಕಾಸು, ಕಾನೂನು ಇಲಾಖೆಗಳ ಬಲವಾದ ಆಕ್ಷೇಪ ಇದ್ದರೂ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಏಕೆ ತರುತ್ತಿದೆ?

ಈ ಕಾನೂನಿನ ಬಗ್ಗೆ ವಿಸ್ತೃತವಾಗಿ ಚರ್ಚಿಸ ಬೇಕಲ್ಲವೇ..? ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಸುಮಾರು ₹ 2,100 ಕೋಟಿ ಬಾಕಿ ಇರುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ, ರಾಜ್ಯದ ಜಿಎಸ್​ಟಿ ಬಾಕಿ ಮೊತ್ತ, ಅತಿವೃಷ್ಟಿ, ಅನಾವೃಷ್ಟಿ ಬಾಕಿ ಮೊತ್ತವೆಲ್ಲ ಏನಾಯಿತು ಎಲ್ಲವೂ ಅಯೋಮಯ. ಆದರೂ ಮುಖ್ಯಮಂತ್ರಿ ಬೊಮ್ಮಾಯಿಯವರ ದೆಹಲಿ ಪ್ರವಾಸ ಯಶಸ್ವಿಯಾಗಿದೆ.

Latest article