Sunday, October 2, 2022

ಆತ್ಮ ಸಾಕ್ಷಿಯಾಗಿ ಕೆಲಸ‌ ಮಾಡಿದ್ರೆ, ರಾಜ್ಯ ಸುಭೀಕ್ಷವಾಗಿರುತ್ತದೆ- ಸಿಎಂ ಬೊಮ್ಮಾಯಿ

Must read

ಬೆಂಗಳೂರು: ಗುಂಡೂರಾವ್ ಸಿಎಂ ಆಗಿದ್ದಾಗ ವಿಧಾನಸೌದದ ಮೇಲೆ ಸರ್ಕಾರಿ‌ ಕೆಲಸ ದೇವರ ಕೆಲಸ ಅಂತಾ ಬರೆಸಿದ್ದಾರೆ. ನಮ್ಮ ಆತ್ಮ ಸಾಕ್ಷಿಯಾಗಿ ಕೆಲಸ ಮಾಡಬೇಕು. ನಿಮ್ಮ ಆತ್ಮ ಸಾಕ್ಷಿಯಾಗಿ ಕೆಲಸ‌ ಮಾಡಿದ್ರೆ, ರಾಜ್ಯ ಸುಭೀಕ್ಷವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಾಂಗ ಕೆಲಸ ಮಾಡಿದಷ್ಟು ಬಡವರ ಕಲ್ಯಾಣವಾಗುತ್ತದೆ. ನಾಡಿನ ಅಭಿವೃದ್ಧಿ ಆಗುತ್ತದೆ. ಜವಾಬ್ದಾರಿ ತೆಗೆದುಕೊಂಡು ಜನ ಕಲ್ಯಾಣ ಮಾಡಬೇಕಿದೆ. ನಿಮ್ಮ ದುಡಿಮೆಯಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಬಡವರಿಗೆ ನಿಮ್ಮ ನಿರ್ಣಯಗಳಿಂದ ಸಹಾಯವಾದರೆ ಆಶೀರ್ವಾದ ಮಾಡುತ್ತಾರೆ. ಖಾಸಗಿಯವರಿಗೆ ಜವಾಬ್ದಾರಿ ಟಾಸ್ಕ್ ‌ಇರುತ್ತದೆ, ನಿಮಗೆ ಜವಾಬ್ದಾರಿ ಜೊತೆ ಅಧಿಕಾರವಿದೆ ಎಂದಿದ್ದಾರೆ.

ಇನ್ನು ಜನ ಸಾಮಾನ್ಯರಿಗಾಗಿ ನಾವು ಸೇವೆ ಮಾಡಬೇಕು. ಜನ ಸಮಾನ್ಯರು ಬಂದಾಗ ಅವರಿಗೆ ಗೌರವ ಕೊಡಬೇಕು. ನಮ್ಮ ಗುರಿ ರಾಜ್ಯ ದೇಶದ ಅಭಿವೃದ್ಧಿಯಾಗಿರಬೇಕು. ಕೋವಿಡ್​ನಿಂದ ಆರ್ಥಿಕತೆ ಹಿಂದೆ ಹೋಗಿತ್ತು. ಈಗ ಆರ್ಥಿಕತೆ ಸುಧಾರಣೆಯಾಗುತ್ತಿದೆ. ಪ್ರವಾಹ ಬಂದಿದೆ ಜನರು ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನಲ್ಲಿ ಆರ್ಥಿಕ ತೊಂದರೆಯಾಗಿದೆ. ಅವರ ಪರವಾಗಿ‌ ನಿಲ್ಲೋದು ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರ ಪ್ರಮಾಣಿಕತೆಯಿಂದ‌ ಕೆಲಸ ಮಾಡುತ್ತಿದೆ ಎಂದರು.

Latest article