Thursday, January 20, 2022

ಸಂಪುಟ ಪುನಾರಚನೆಗೆ ಪಟ್ಟಿ ಸಿದ್ಧಪಡಿಸಿದ ಸಿಎಂ: ಈ ಬಾರಿ ಯಾರ್ಯಾರಿಗೆ ಸಚಿವ ಸ್ಥಾನ..?

Must read

ಬೆಂಗಳೂರು: ಶೀಘ್ರದಲ್ಲೇ ದೆಹಲಿಗೆ ತೆರಳಲು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಸಿದ್ಧತೆ ನಡೆಸುತ್ತಿದ್ದು, ಕೊರೊನಾದಿಂದ ಸಂಪೂರ್ಣ ಚೇತರಿಕೆ ಕಂಡ ನಂತರ ದೆಹಲಿಗೆ ತೆರಳಿ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್​ ಬಳಿ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ 11 ಮಂದಿಯ ಪಟ್ಟಿ ಸಿದ್ಧ ಮಾಡಿಕೊಂಡಿರುವ ಸಿಎಂ ಬೊಮ್ಮಾಯಿ ಹೊಸ ಪಟ್ಟಿಯನ್ನೆ ಹೈ ಕಮಾಂಡ್​​ಗೆ ನೀಡಲಿದ್ದಾರೆ. ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಸಿಎಂ ಪ್ರಯತ್ನಿಸುತ್ತಿದ್ದು, ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಮಾಡಲಿದ್ದಾರೆ. ಆರೇಳು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಿ ಉಳಿದ ನಾಲ್ಕು ಖಾತೆಗಳ ಭರ್ತಿ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ.

ಸಂಪುಟ ಪುನಾರಚನೆ ವಿಳಂಬವಾದ ಕಾರಣ ಶಾಸಕರಲ್ಲಿ ಅಸಮಾಧಾನ ಶುರುವಾಗಿದೆ ಹೀಗಾಗಿ ಸಂಪುಟ ಪುನಾರಚನೆ ಮಾಡಿದರೆ ಸಮಸ್ಯೆಗೆ ಬ್ರೇಕ್ ಬೀಳಬಹುದು ಎನ್ನುವುದು ಸಿಎಂ ಲೆಕ್ಕಾಚಾರವಾಗಿದೆ. ಹೀಗಾಗಿ ವರಿಷ್ಠರ ಅನುಮತಿ ಪಡೆಯಲು ಸಿಎಂ ಮುಂದಾಗಿದ್ದಾರೆ.

ಈಗಾಗಲೇ ಸಾಲು ಸಾಲು ಶಾಸಕರು ಸಂಪುಟ ಪುನಾರಚನೆ ಕಾದುಕುಳಿತಿದ್ದಾರೆ. ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ಎಂ.ಪಿ.ರೇಣುಕಾಚಾರ್ಯ, ಡೆಪ್ಯುಟಿ‌ ಸ್ಪೀಕರ್ ಆನಂದ ಮಾಮನಿ, ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ ಕುಮಾರ್ ಪಾಟೀಲ್ ಸೇಡಂ, ಪೂರ್ಣಿಮಾ ಶ್ರೀನಿವಾಸ್, ರಾಮದಾಸ್, ಪ್ರೀತಂಗೌಡ, ಸುರಪುರದ ರಾಜುಗೌಡ, ಶಿವನಗೌಡ ನಾಯಕ್, ಚಿತ್ರದುರ್ಗದ ತಿಪ್ಪಾರೆಡ್ಡಿ, ರಾಮಣ್ಣ ಲಮಾಣಿ ಸೇರಿ ಹಲವರು ಈ ಬಾರಿಯಸಂಪುಟ ಪುನಾರಚನೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

Latest article