Tuesday, May 17, 2022

17 ಮಂದಿ ಸಚಿವರಾಗಿ ಮುಂದುವರೆಯುತ್ತಾರೋ ಇಲ್ವೋ ಗೊತ್ತಿಲ್ಲ- ಬಿಎಸ್​ವೈ

Must read

ಮೈಸೂರು: ಹದಿನೇಳು ಮಂದಿ ಸಚಿವರಾಗಿ ಮುಂದುವರೆಯುತ್ತಾರೋ ಇಲ್ಲವೂ ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ, ಅಮಿತ್‌ ಶಾರನ್ನು ಭೇಟಿಯಾಗಿ ಬಂದಿದ್ದಾರೆ. ಮೂರ್ನಾಲ್ಕು ದಿನಗಳೊಳಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಮೂರ್ನಾಲ್ಕು ದಿನದಲ್ಲಿ ಸಂಪೂರ್ಣ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಕೇಂದ್ರದ ನಾಯಕರು ಶೀಘ್ರವೇ ಈ ತೀರ್ಮಾನ ಪ್ರಕಟಿಸಲಿದ್ದಾರೆ. ಬಿ.ವೈ. ವಿಜಯೇಂದ್ರ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇನ್ನು ಭ್ರಷ್ಟಚಾರ ಸರಕಾರ, ದುರ್ಬಲ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಯಾರು ದುರ್ಬಲರಿದ್ದರೋ ಯಾರು ಭ್ರಷ್ಟರಿದ್ದೋ ಅವರ ಬಾಯಲ್ಲಿ ಅದೇ ಮಾತು ಬರುತ್ತಿದೆ. ಸಿದ್ದರಾಮಯ್ಯ ಕಾಲದಲ್ಲಿ ಏನೇನಾಯ್ತು ಎಂಬ ಕಥೆ ಜಗತ್ತಿಗೆ ಗೊತ್ತಿದೆ. ವಿಪಕ್ಷ ನಾಯಕರ ಗೌರವದಿಂದ ನಡೆದು ಕೊಳ್ಳುವುದನ್ನು ಕಲಿಯಬೇಕು. ಸರ್ಕಾರ ಅಧಿಕಾರಕ್ಕೆ ಬರಲು ಸಹಕಾರ ಕೊಟ್ಟ ಹದಿನೇಳು ಮಂದಿ ಸಚಿವರಾಗಿ ಮುಂದುವರೆಯುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

Latest article