Wednesday, June 29, 2022

ಸಿದ್ದರಾಮಯ್ಯ ಕೀಳು ಅಭಿರುಚಿಯ ರಾಜಕಾರಣಿ-ಸಚಿವ ಆರಗ ಜ್ಞಾನೇಂದ್ರ

Must read

ಬೆಂಗಳೂರು: ಪ್ರಧಾನಿ ಮೋದಿಯವರ ನೇತೃತ್ವದಲ್ಲಿಯೇ ಕೋವಿಡ್ ಸಂದರ್ಭದಲ್ಲಿ ಈ ದೇಶ ಬದುಕಿ ಬಚಾವಾಗಿದೆ. ಇದನ್ನು ಇಡೀ ವಿಶ್ವ ಕೊಂಡಾಡುತ್ತಿದೆ. ಅವರ ಬಗ್ಗೆ ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಸಿದ್ದರಾಮಯ್ಯ ಕೀಳು ಅಭಿರುಚಿಯ ರಾಜಕಾರಣಿ. ಸಿದ್ದರಾಮಯ್ಯ ಎಲ್ಲರ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸಾಕಷ್ಟು ಹಣ ಕೊಟ್ಟು ಎರಡು ವರ್ಷ ಉಚಿತ ಅನ್ನ, ವ್ಯಾಕ್ಸಿನ್ ಕೊಟ್ಟಿದ್ದಾರೆ. ಜಗತ್ತಿನಲ್ಲಿ ಹೆಚ್ಚು ವ್ಯಾಕ್ಸಿನ್ ಕೊಟ್ಟಿರುವ ದೇಶ ನಮ್ಮದು. ಇದೆಲ್ಲವನ್ನೂ ಮರೆತು ಸಿದ್ದರಾಮಯ್ಯ ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಬಗ್ಗೆ ಬಿಟ್ಟು ಉಳಿದವರೆಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಬಹಳ ಅಸಡ್ಡೆಯಿಂದ ಮಾತನಾಡುತ್ತಾರೆ. ಅವರು ಕೀಳು ಅಭಿರುಚಿಯ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.

ಇನ್ನು ರಾಹುಲ್​ ಗಾಂಧಿಗೆ ED ವಿಚಾರಣೆ ಖಂಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಇಡೀ ದೇಶದಲ್ಲಿ ನಗೆಪಾಟಲಿಗೀಡಾಗುತ್ತಿದೆ. ಕಾನೂನು ಜನರಿಗೊಂದು ಗಾಂಧಿ ಕುಟುಂಬಕ್ಕೆ ಒಂದಲ್ಲ. ಜನ ಕಾಂಗ್ರೆಸ್ ಬಗ್ಗೆ ತುಚ್ಛವಾಗಿ ನೋಡುತ್ತಿದ್ದಾರೆ. ವಿಚಾರಣೆಯನ್ನೇ ಮಾಡಬಾರದು ಎನ್ನುವ ಇವರದು ಯಾವ ರೀತಿಯ ರಾಜಕೀಯ ಪಕ್ಷ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

Latest article