Wednesday, May 18, 2022

ಗೃಹ ಸಚಿವ ಅಮಿತ್‌ ಶಾ ನಿವಾಸದಲ್ಲಿ ಕ್ಯಾಪ್ಟನ್‌: ಬ್ರೇಕಿಂಗ್​​ ಎಂಬ ಸವಕಲು ಸುದ್ದಿ

Must read

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾರೆ.

ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ನಡುವೆ ಅಮರಿಂದರ್‌ ಸಿಂಗ್‌ ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದು ಕುತೂಹಲದ ಸಂಗತಿ ಅಷ್ಟೇ. ಆದರೆ,ಅದೇನು ಭಾರತ ಬದಲಿಸಬಲ್ಲ ಬಹುದೊಡ್ಡ ಸುದ್ದಿಯಲ್ಲ. ಅಮರಿಂದರ್​ ಸಿಂಗ್​ ಬಿಜೆಪಿ ಸೇರಲಿದ್ದಾರೆ, ಬಿಜೆಪಿಯಲ್ಲಿ ಕೇಂದ್ರ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬುದು ಪುಕಾರು. ಹಾಗೊಂದು ವೇಳೆ ಅವರು ಬಿಜೆಪಿ ಸೇರಿದರೆ ಅದು ಅವರ ವೈಯಕ್ತಿಕ ಏಳಿಗೆಗೆ ಸಂಬಂಧಿಸಿದ ಸಂಗತಿಯೇ ಹೊರತು, ಭಾರತೀಯರಿಗೆ ಅದರಿಂದೇನೂ ಲಾಭವಿಲ್ಲ.

ಅದೇ ಅಮರಿಂದರ್​​ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ ಅದು ದೊಡ್ಡ ಸುದ್ದಿ. ಕಾರಣ ಇಲ್ಲಿ ಸ್ಪಷ್ಟ ಜನರ ಕಷ್ಟಗಳಿಗೆ ಸ್ಪಂದಿಸುವವನು ಶಾಸಕ, ಸಂಸದ ಅಥವಾ ಸಚಿವ. ಹಾಗಾಗಿ ದೇಶದ ಜನರಿಗೆ ಲಾಭವಿಲ್ಲದ ಅವರ ದೆಹಲಿ ಪ್ರವಾಸವನ್ನು ಬಹುದೊಡ್ಡ ಸುದ್ದಿ ಎಂದು ಭಾವಿಸುವುದೇ ಒಂದು ಮೂರ್ಖತನ.

Latest article