Wednesday, June 29, 2022

ಕುಮಾರಸ್ವಾಮಿ ನನ್ನ ಸಲಹೆಯನ್ನು ಒಪ್ಪಿಕೊಂಡಿದ್ರೆ ಶಾಶ್ವತವಾಗಿ ರಾಜ್ಯದ ಸಿಎಂ ಆಗಿರುತ್ತಿದ್ದರು-ಎ.ಟಿ ರಾಮಸ್ವಾಮಿ

Must read

ಹಾಸನ: ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ ಎಂದೂ ಕೂಡ ನಾನು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಸ್ವಾರ್ಥಕ್ಕಾಗಿ ಎಲ್ಲಿಯೂ ಕೂಡ ನಮ್ಮ ನಾಯಕರಿಗೆ ಕೆಟ್ಟ ಹೆಸರು ಬರದ ರೀತಿ ನಡೆದುಕೊಂಡಿದ್ದೇನೆ ಎಂಬ ವಿಶ್ವಾಸವಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.

ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ, ರೇವಣ್ಣ ಅವರೇ, ನಿಮ್ಮ ಶಕ್ತಿಯಾನುಸಾರ ನೀವು ಕೊಡುಗೆ ಕೊಟ್ಟಿದ್ದೀರಿ ಅದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕುಮಾರಸ್ವಾಮಿ ಅವರು ನನ್ನ ಸಲಹೆಯನ್ನು ಒಪ್ಪಿಕೊಂಡಿದ್ದರೆ ಶಾಶ್ವತವಾಗಿ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಇರುತ್ತಿದ್ದರು. ಒಂದು ಹಂತದಲ್ಲಿ ಬಹಳ ವಿನಯಪೂರ್ವಕವಾಗಿ ನಾನು ಐವತ್ತು, ನೂರು ಬಾರಿ ಹೇಳಿದೆ. ಅವತ್ತು ಒಪ್ಪಿಕೊಂಡಿದ್ರೆ ನೀವು ಶಾಶ್ವತ ಮುಖ್ಯಮಂತ್ರಿಯಾಗಿಯೇ ಇರುತ್ತಿದ್ದೀರಿ. ಆದರೆ ಅವರು ರೇವಣ್ಣ ಅವರ ಮಾತು ಕೇಳಿದ್ರೆನೋ ನನಗೆ ಗೊತ್ತಿಲ್ಲ. ರೇವಣ್ಣ ಅವರು ಅಭಿವೃದ್ಧಿಗೆ ಎತ್ತಿದ ಕೈ, ನೀವು ಎಷ್ಟು ಶ್ರಮಜೀವಿ, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಇನ್ನು ನಾನು ಎಂದು ಕೂಡ ಅಧಿಕಾರ, ಹಣ, ಆಸ್ತಿ ಹಿಂದೆ, ಹೋದವನಲ್ಲ. ನಾನು ಬಂದಿದ್ದು ನಮ್ಮ ಬಡವರು, ರೈತರು, ಜನರಿಗಾಗಿ, ಅದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ನಾನು ಮಂತ್ರಿಯಾಗಬೇಕು ಎಂದು ಮನಸ್ಸು ಮಾಡಿದ್ದರೆ ಕರೆದು ಮಂತ್ರಿ ಮಾಡುತ್ತಿದ್ದರು. ಕುಮಾರಸ್ವಾಮಿ ಅವರೇ ಒಂದು ಸಾರಿ ಕೇಳಿದ್ರು, ಬೇಡ ಅಂತ ಹೇಳಿದ್ದೆ. ಎಂಥೆಂಥ ಆಫರ್‌ಗಳು ಬಂದವು, ಅವೆಲ್ಲವನ್ನೂ ಧಿಕ್ಕರಿಸಿದ್ದೇನೆ ಅದು ತತ್ವ ಸಿದ್ಧಾಂತಕ್ಕಾಗಿ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ನ್ಯಾಯ, ನೀತಿ, ಧರ್ಮದಿಂದ ನಡೆದುಕೊಂಡು ಹೋಗುತ್ತಿದ್ದೇನೆ. ದ್ವೇಷಕ್ಕೋಸ್ಕರ ಹೊರಗಡೆ ಬೆಂಕಿ ಹಾಕುವುದು ಸುಲಭ. ಹೊರಗಡೆ ಬೆಂಕಿಯನ್ನು ಅಗ್ನಿಶಾಮಕ ಮೂಲಕ ಆರಿಸಬಹುದು. ಆದರೆ ಒಳಗಿನ ಬೆಂಕಿ ಇದೆಯಲ್ಲ, ದ್ವೇಷ, ಅಸೂಯೆ ಬೆಂಕಿ ಅದನ್ನು ಆರಿಸಲು ಸಾಧ್ಯವಿಲ್ಲ ಎಂದರು.

Latest article