ಬೆಂಗಳೂರು: ಇಂದು ನೆಲಮಂಗಲದಲ್ಲಿ ಜೆಡಿಎಸ್ ಜನತಾ ಜಲಧಾರೆ ಸಮಾರೋಪ ನಡೆಯಲಿದ್ದು, ರಾಜ್ಯದ ಅನೇಕ ಭಾಗಳಿಂದ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಹಾಸನದಿಂದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕಾರ್ಯರ್ತರನ್ನು ಕರೆತರಲು ಜೆಡಿಎಸ್ ನಾಯಕರು 4೦೦ ಕೆಎಸ್ಆರ್ಟಿಸಿ ಬಸ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.
ಇತ್ತ ಹಾಸನ, ಚನ್ನರಾಯಪಟ್ಟಣ, ಹಿರೀಸಾವೆಯಲ್ಲಿ ಕೆಎಸ್ಆರ್ಟಿ ಸಂಚಾರವಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಿಗ್ಗೆ 5ಗಂಟೆಯಿಂದ ಕಾಯುತ್ತಿದ್ದೇನೆ. ಒಂದೇ ಒಂದು ಬಸ್ ಕೂಡ ಬಂದಿಲ್ಲ. ಇರುವ ಬಸ್ಗಳನ್ನು ಕೆಎಸ್ಆರ್ಟಿಸಿ ಅವರು ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ, ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.