Tuesday, October 26, 2021

ಬಿಎಂಟಿಸಿಯಲ್ಲಿ ಆಯುಧ ಪೂಜೆ ಮತ್ತು ಹಬ್ಬವಿಲ್ಲದ ನೌಕರರ ಕುಟುಂಬ..!

Must read

ಕೊರೊನಾಘಾತದಿಂದಾಗಿ ಸಾರಿಗೆ ನಿಗಮಗಳು ಬರ್ಬಾದ್ ಆಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಸಂಚಾರ ಆರಂಭವಾದರೂ ಸಹಜ ಸ್ಥಿತಿಗೆ ಬಂದಿಲ್ಲ. ತಿಂಗಳು ಬಂದರೆ ಸಂಬಳ ನೀಡೋಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದೀಗ ಸಂಬಳ ಇರಲಿ ಆಯುಧಪೂಜೆ ಮಾಡೋಕೂ ದುಡ್ಡಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದು, ಬಿಎಂಟಿಸಿಯಲ್ಲಿ ದಸರಾ ಸಂಭ್ರಮವೇ ಇಲ್ಲದಂತಾಗಿದೆ.

ಬಿಎಂಟಿಸಿ ಬೆಂಗಳೂರಿನ ನಾಡಿಮಿಡಿತ. ಒಂದು ದಿನ ಬಸ್ ಸಂಚಾರ ಸ್ಥಗಿತಗೊಂಡರೆ ಇಡೀ ಬೆಂಗಳೂರಿನ ಜನ ತತ್ತರಿಸಿ ಹೋಗ್ತಾರೆ. ಇಂತಹ ಸಂಸ್ಥೆ ದಿನೇ ದಿನೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಒದ್ದಾಡ್ತಿದೆ. ನೌಕರರಿಗೆ ಸಂಬಳ ನೀಡೋಕೆ ಆಗದೆ ಆಗಸ್ಟ್ ತಿಂಗಳಿಂದ ಅರ್ಧ ಸಂಬಳ ನೀಡುತ್ತಾ ಬಂದಿರುವ ನಿಗಮ, ಇದೀಗ ಆಯುಧ ಪೂಜೆಗೂ ದುಡ್ಡಿಲ್ಲದೆ ಬರ್ಬಾದ್ ಆಗಿದೆ. ಬಿಎಂಟಿಸಿ ಪ್ರತಿ ವರ್ಷ ಆಯುಧಪೂಜೆಗೆ ಅಂತ  ಚಾಲಕ ಹಾಗೂ ನಿರ್ವಾಹಕರಿಗೆ ವಾಹನಗಳಿಗೆ  ಪೂಜೆ ಮಾಡಿ ಅಂತ ಭತ್ಯೆ ನೀಡುತ್ತಿತ್ತು.. ಆದ್ರೆ ಈ ಬಾರಿ ಇಲ್ಲಿಯವರೆಗೆ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ..

ಆದ್ರೆ ವಿಷ್ಯ ಅದಲ್ಲ, ನೀವು ಭತ್ಯೆ ಕೊಡುತ್ತೀರೋ ಇಲ್ವೋ ಆದ್ರೆ ದಯವಿಟ್ಟು ಸಾರಿಗೆ ನೌಕರರಿಗೆ ದಯವಿಟ್ಟು ಸಂಬಳ ಕೊಡಿ ಅಂತ ಕೇಳಬೇಕಾಗಿರೋದು ನ್ಯಾಯಯುತ. ನೀವು ಸಂಬಳ ಕೊಟ್ಟರೆ ಸಾಕು, ಭತ್ಯೆಗೂ ಕಾಯದ ಜನರು ಅವರಾಗೇ ಅವರು ತಾವು ದುಡಿಯುವರಥವನ್ನು ಚಿನ್ನದಂತೆ ಅಲಂಕರಿಸುತ್ತಾರೆ ನೋ ಡೌಟ್ದ್..! ಆದ್ರೆ ಭತ್ಯೆ ಹೆಸರಿನ  ಪುಡಿಗಾಸಲ್ಲಿ, ಹೂವು-ಬಾಳೆ ಕಂದು-ತಳಿರು ತೋರಣಗಳನ್ನ ಖರೀದಿಸೋದಕ್ಕಾದ್ರೂ ಆಗುತ್ತಾ ಯೋಚ್ನೆ ಮಾಡಿ.ನೀವು ಸಂಬಳ ಕೊಡಿ, ಬಸ್​ ಅನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುತ್ತಾರೆ ನೌಕರರು. ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಸಂಬಳವೇ ಸಿಕ್ಕಿಲ್ಲವಂತೆ. ಇದು ಆಯುಧಪೂಜೆ ಆಚರಿಸುವ ಸಂಭ್ರಮವನ್ನೇ ಕಾರ್ಮಿಕರಲ್ಲಿ ಮೂಡಿಸಿಲ್ಲ. ಭತ್ಯೆ ಇಲ್ಲದಿದ್ದರೆ ಅಟ್ಲೀಸ್ಟ್ ಸಂಬಳದಿಂದಲಾದ್ರೂ ಖರ್ಚನ್ನು ನಿಭಾಯಿಸಿ ಆಯುಧಪೂಜೆ ಆಚರಿಸುತ್ತಿದ್ದ ಕಾರ್ಮಿಕರಿಗೆ ಕಳೆದೆರೆರಡು ತಿಂಗಳಿಂದ ಸಂಬಳವೇ ಸರಿಯಾಗಿ ಕೈ ಸೇರಿಲ್ಲ.

ಇಲಾಖೆ ಕಡಿಮೆ ಭತ್ಯೆ ಕೊಟ್ಟರೂ ತಮಗೆ ವರ್ಷ ಪೂರ್ತಿ ಅನ್ನ ಕೊಡುವ ಬಸ್ ಗಳನ್ನು ತಮ್ಮ ಜೇಬಿನಿಂದಲೇ ಹಣ ಹಾಕಿ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದರು ನೌಕರರು. ಇಲಾಖೆ ಕೊಡುವ ಪುಡಿಗಾಸಿನ ಭತ್ಯೆಗೆ ಎಂದೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ, ಸಾರಿಗೆ ನೌಕರರ ಪಾಲಿನ ಅತ್ಯಂತ ಸಂಭ್ರಮದ ಆಯುಧಪೂಜೆಗೆ ಈ ಬಾರಿ ಸಂಬಳ ದೊಡ್ಡ ಹೊಡೆತ ಕೊಟ್ಟಿದೆ. ಇದು ನಿಜವಾದ ಸುದ್ದಿ..! ನೀವು ಭತ್ಯೆ ಕೊಡಲಿಲ್ಲ ಅನ್ನೋದು ಸುದ್ದಿಯಲ್ಲ ‘ರದ್ದಿ’..!

Also read:  ಹವಾಯಿ ಚಪ್ಪಲಿ ತೊಟ್ಟವರ ಹವಾಯಿ ಕನಸು ಹವಾ ಹವಾಯಿ..!

More articles

Latest article