Tuesday, October 26, 2021

ಐಟಿ ದಾಳಿ ಮತ್ತು ಉಳಿದು ಹೋದ ಗೊಂದಲಗಳು..!

Must read

ನಗರದಲ್ಲಿ ಮತ್ತೊಂದು ಐಟಿ ದಾಳಿ ನಡೆದಿದೆ. ತೆರಿಗೆ ವಂಚನೆ ಹಿನ್ನೆಲೆ ನಡೆದ ದಾಳಿಯಲ್ಲಿ ಸಾಕಷ್ಟು ರಾಜಕೀಯವಿದೆ. ಬಳ್ಳಾರಿ ರಸ್ತೆಯಲ್ಲಿರುವ ಡಿಸೈನ್ ಬಾಕ್ಸ್ ಎಂಬ ಸಂಸ್ಥೆ ಮೇಲೆ ಎಂಟು  ಜನ ಅಧಿಕಾರಿಗಳು ಇಂದು ಬೆಳಗಿನ ಜಾವ ಆರು ಗಂಟೆಗೆ ದಾಳಿ ನಡೆಸಿದ್ದು ಹಲವು ದಾಖಲಾತಿಗಳನ್ನ ಪರಿಶೀಲನೆ ನಡೆಸಿದ್ರು.

ಬಳ್ಳಾರಿ ರಸ್ತೆಯಲ್ಲಷ್ಟೇ ಅಲ್ಲದೆ ಜೆ.ಡಬ್ಲ್ಯೂ. ಮ್ಯಾರೆಟ್​​ ಹೊಟೇಲ್ ಬಳಿ ಇರುವ ಸಂಸ್ಥೆಯ ಮತ್ತೊಂದು ಬ್ರಾಂಚ್ ಮೇಲೆ ಕೂಡಾ ಐಟಿ ದಾಳಿ ನಡೆದಿದೆ. ಆ ಹೊಟೇಲ್ ನಲ್ಲಿ ಸ್ವತಃ ಹ್ಯಾರೀಸ್ ಪುತ್ರ ನಲಪಾಡ್, ಗುಂಜಿತ್ ಕೌರ್ ಮತ್ತು ನರೇಶ್ ಅರೋರರಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತಂತೆ. ಹೀಗಾಗಿ ಅಲ್ಲಿ ಕೂಡ ದಾಳಿ ನಡೆಸಿ ಸ್ಥಾಪಕ ನರೇಶ್ ಮತ್ತು ಸಹ ಸಂಸ್ಥಾಪಕಿ ಗುಂಜಿತ್​​ರನ್ನ ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಬೆಂಗಳೂರು ಮಾತ್ರವಲ್ಲದೆ ಪಂಜಾಬ್ ,ರಾಜಸ್ಥಾನ್, ಪಾಂಡಿಚೇರಿ ಸೇರಿ ಒಟ್ಟು ನಾಲ್ಕು ಕಡೆ ದಾಳಿ ನಡೆಸಲಾಗಿದೆ.

ನರೇಶ್ ಅರೋರಾ ಫೌಂಡರ್ ಆಗಿ ಗುಂಜಿತ್ ಕೌರ್ ಕೋ ಫೌಂಡರ್ ಆಗಿರುವ ಡಿಸೈನ್ ಬಾಕ್ಸ್ ಕಂಪನಿ ಬಹುತೇಕ ಕಾಂಗ್ರೇಸ್ ನಾಯಕರನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಿ ಕ್ಯಾಂಪೇನ್ ಗಳನ್ನ ಮಾಡುತ್ತಿದ್ದ ಸಂಸ್ಥೆ. ಇತ್ತೀಚೆಗೆ ಪಂಜಾಬ್​ನಲ್ಲಿ ನಡೆದ ಎಲೆಕ್ಷನ್​ನಲ್ಲಿಯೂ ಈ ಸಂಸ್ಥೆ ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿತ್ತು. ಅಷ್ಟೇ ಅಲ್ಲದೆ, ನಗರದಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಪ್ರಸ್ತುತ ಹ್ಯಾರೀಸ್ ಪುತ್ರ ನಲಪಾಡ್ ಮತ್ತು ಡಿಕೆ ಶಿವಕುಮಾರ್ ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೆನ್ ಮಾಡಿಕೊಂಡೇ ಬಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ಒಪ್ಪಂದ ಮುಗಿದ ಹಿನ್ನಲೆ ಔಟ್ ಸೋರ್ಸ್ ಬೇಸಿಸ್ ಮೇಲೆ ಡಿಕೆ ಶಿವಕುಮಾರ್ ಪರ ಕ್ಯಾಂಪೇನ್ ಮಾಡ್ತಿದೆ. ಐಟಿ ದಾಳಿಯ ಹಿನ್ನೆಲೆಗೆ ಇದಕ್ಕಿಂತಾ ಮಹತ್ವದ ಉದ್ದೇಶ ಬೇಕಾ..? ಹೇಳಿ..!

More articles

Latest article