Monday, January 24, 2022

ಹಂದಿಯ ಹೃದಯದಿಂದ ಬದುಕುಳಿದ ಮಾನವ. ವಿಜ್ಞಾನಿಗಳ ವಿನೂತನ ಪ್ರಯೋಗದಲ್ಲಿ ಯಶಸ್ಸು

Must read

ಜಗತ್ತಿನಲ್ಲಿ ಹಲವು ಪ್ರಯೋಗಗಳು ನಡೆಯುತ್ತಲೇ ಇರುತ್ತೆ ..ಅದರಲ್ಲಿ ಬಹುತೇಕ ಯಶಸ್ಸು ಕೂಡ ಸಿಕ್ಕಿದೆ. ಹೌದು ಈಗ ಮತ್ತೊಂದು ಪ್ರಯೋಗ ಸಕ್ಸಸ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ .ಹಂದಿಯ ಹೃದಯವನ್ನ ಮಾನವನಿಗೆ ಜೋಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಹೃದಯ ಸಂಬಂಧಿ ಖಾಯಿಲೆ ಹೊಂದಿರಯವವರಿಗೆ ಸಿಹಿ ಸುದ್ಧಿ ಎನ್ನಬಹುದು .ಹಂದಿಯ ಹೃದಯ ಕೂಡ ಮನುಷ್ಯನ ರಕ್ಷಣೆ ಮಾಡುತ್ತೆ ಅನ್ನೋದಕ್ಕೆ ಈ ಪ್ರಯೋಗವೇ ಸಾಕ್ಷಿ. ಅಮೇರಿಕಾದ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ

ಡೇವಿಡ್ ಎಂಬಾತ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದರು. ಇನ್ನೇನು ಪ್ರಾಣ ಹೋಗುವ ಸ್ಥಿತಿಯಲ್ಲಿದ್ದ ಡೇವಿಡ್ ಗೆ ತುರ್ತು ಚಿಕಿತ್ಸೆ ಒಳಪಡಿಸಲಾಗಿತ್ತು.. ಅದಾಗಲೆ ಅಭಿವೃದ್ದಿ ಪಡಿಸಿದ್ದ ಹಂದಿ ಹೃದಯದ ಪ್ರಯೋಗವನ್ನ ಅಳವಡಿಸಿ ಹೃದಯವನ್ನ ಯಶಸ್ವಿಯಾಗಿ ಜೋಡಿಸಲಾಯ್ತು. ಅಪರೆರಷನ್ ಆದ ಮೂರು ದಿನದ ಬಳಿಕ ಡೇವಿಡ್ ಸ್ಪಂಧಿಸುತ್ತಿದ್ದು,ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಇ‌ನ್ನು ಈ ಪ್ರಯೋಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು ,ಉಳಿದ ವೈದ್ಯರಿಗೆ ಮಾದರಿಯಾಗಿದೆ .ಸದ್ಯ ಮಾನವನ ರಕ್ಷಣೆಗೆ ಪ್ರಾಣಿಗಳ ಹೃದಯ ಬಳಸಿದರೆ ಉತ್ತಮವಾಗಿ ಸ್ಪಂದನೆ ಸಿಗುತ್ತೆ ಎಂಬುದನ್ನ ಈಗಾಗಲೆ ವೈದ್ಯರು ಕಂಡುಕೊಂಡಿದ್ದಾರೆ.

Latest article