Monday, November 29, 2021

ಕಾಳಿಂಗ ಸರ್ಪ ಗಾಜಿನ ಗ್ಲಾಸಿನಿಂದ ನೀರು ಕುಡಿಯುವುದನ್ನು ನೋಡಿದ್ದೀರಾ?

Must read

ನವದೆಹಲಿ : ಕಾಳಿಂಗ ಸರ್ಪವನ್ನು ನೋಡುವುದಿರಲಿ ಅದರ ಹೆಸರು ಕೇಳಿದರೆ ಸಾಕು ಕೈ ಕಾಲು ನಡುಗುತ್ತದೆ. ಅಂಥದರಲ್ಲಿ ಕಾಳಿಂಗಸರ್ಪ ಎದುರು ಬಂದು ನಿಂತರೆ ಸ್ಥಿತಿ ಏನಾಗಬೇಕು ? ಉಹಿಸಿಕೊಲ್ಲುವುದು ಕೂಡಾ ಕಷ್ಟ. ಯಾಕೆಂದರೆ ಕಾಳಿಂಗ ಸರ್ಪ ಅತ್ಯಂತ ವಿಷಕಾರಿ. ಅದು ದೂರದಲ್ಲಿ ಎಲ್ಲೋ ಇದೆ ಎಂದರೂ ಬದುಕುಳಿದರೆ ಸಾಕು ಎಂದು ಎದ್ದು, ಬಿದ್ದು ಓಡುವ ಸ್ಥಿತಿ. ಆದರೆ ಇಲ್ಲೊಂದು ವಿಡಿಯೋ ಇದೆ. ಈ ವಿಡಿಯೋ ನೋಡಿದರೆ ಆಶ್ಚರ್ಯವಾಗುತ್ತದೆ. ಇಲ್ಲಿ ವ್ಯಕ್ತಿಯೊಬ್ಬರು ದಣಿದು ಬಂದ ಸರ್ಪಕ್ಕೆ ಗಾಜಿನ ಲೋಟದಲ್ಲಿ ನೀರು ನೀಡಿದ್ದಾರೆ. ಹಾವು ಕೂಡಾ ನೀರನ್ನು ಗಟನೆ ಗಟನೆ ಕುದಿದು ಮುಗಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಲೋಟದಿಂದ ನೀರು ಕುಡಿಯುತ್ತಿದೆ ಕಾಳಿಂಗ :
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೈಯಲ್ಲಿ ನೀರು ತುಂಬಿದ ಲೋಟವನ್ನು ಹಿಡಿದಿರುವುದನ್ನು ಕಾಣಬಹುದು. ಆ ಲೋಟದ ಪಕ್ಕದಲ್ಲಿಯೇ ಕಾಳಿಂಗ ಸರ್ಪ ಕೂಡಾ ಕಣ್ಣಿಗೆ ಬೀಳುತ್ತದೆ. ಈ ವೀಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತದೆ. ಈ ಸರ್ಪ ಅತ್ಯಂತ ಉದ್ದವಾಗಿದೆ. ಈ ಹಾವು ಕಿಟಕಿಯ ಮೂಲಕ ಮನೆಯ ಒಳಗೆ ಪ್ರವೀಶಿಸಲು ಪ್ರಯತ್ನಿಸುತ್ತಿದೆ. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬರು ಗಾಜಿನ ಲೋಟದಲ್ಲಿ ನೀರು ನೀಡುವುದನ್ನು ಕಾಣಬಹುದು. ಹಾವು ಲೋಟದಿಂದ ನೀರು ಕುಡಿಯುತ್ತದೆ. ಆದರೆ ವ್ಯಕ್ತಿಗೆ ಏನೂ ಮಾಡುವುದಿಲ್ಲ. ಅಂದಹಾಗೆ, ಇದೊಂದು ವಿಷಕಾರಿ ಹಾವು. ಇದು ಕಚ್ಚುವುದು ಮಾತ್ರವಲ್ಲ, , ವಿಷವನ್ನು ಉಗುಳಿದರೂ ಕ್ಷಣ ಮಾತ್ರದಲ್ಲಿ ಉದುರಿಗಿರುವವನ ಪ್ರಾಣ ಹೋಗುತ್ತದೆ.
ವಿಡಿಯೋ ವೀಕ್ಷಿಸಿದವರಿಗೆ ಅಚ್ಚರಿ :
ಈ ವೀಡಿಯೋ (video) ನೋಡಿ ಕೆಲವರಿಗೆ ಅಚ್ಚರಿಯಾದರೆ, ಕೆಲವರು ವಿಚಿತ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾವಿನ ಈ ವಿಶಿಷ್ಟ ವೀಡಿಯೊವನ್ನು Royal_pythons_ ಹೆಸರಿನ Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ. ವಾರದ ಹಿಂದೆ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಇದುವರೆಗೆ 1 ಲಕ್ಷದ 22 ಸಾವಿರಕ್ಕೂ ಹೆಚ್ಚು ವ್ಯೂಸ್ ಬಂದಿದೆ. ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ.

 

View this post on Instagram

 

A post shared by Royal Pythons (@royal_pythons_)

Latest article