Thursday, October 6, 2022

ಖಾರ್ಕಿವ್​ನಿಂದ ವಿಜಯಪುರ ಮೂಲದ ವಿದ್ಯಾರ್ಥಿನಿ ಸುರಕ್ಷಿತವಾಗಿ ವಾಪಸ್​

Must read

ವಿಜಯಪುರ: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ವಿಜಯಪುರ ಮೂಲದ ವಿದ್ಯಾರ್ಥಿನಿ ಸುರಕ್ಷಿತವಾಗಿ ತಮ್ಮ ಹುಟ್ಟೂರಿಗೆ ವಾಪಸ್​ ಆಗಿದ್ದಾರೆ.

ವಿಜಯಪುರ ನಗರದ ಸಾಯಿ ಪಾರ್ಕ್‌ ನಿವಾಸಿ ರಕ್ಷಾ ಕಂಬಾಗಿ ಇಂದು ಮನೆಗೆ ಆಗಮಿಸಿದ್ದು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹೂಗುಚ್ಚ ನೀಡಿ ಶಾಲು ಹೊದಿಸಿ ಮಗಳನ್ನು ಮನೆಗೆ ಬರ ಮಾಡಿಕೊಂಡ ಪೋಷಕರು ಕೇಕ್ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ರಕ್ಷಾ ಉಕ್ರೇನ್ ದೇಶದ ಖಾರ್ಕಿವ್​ನ ವಿ.ಎನ್ ಖರಾಜಿನ್ ಮೆಡಿಕಲ್ ಕಾಲೇಜಿನ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದು, ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರಿದ ಹಿನ್ನಲೆಯಲ್ಲಿ ಸದ್ಯ ಭಾರತಕ್ಕೆ ವಾಪಸ್​ ಆಗಿದ್ದಾರೆ.

Latest article