Tuesday, August 16, 2022

ಚಾಲಕನಿಗೆ ಚೆಲ್ಲಾಟ..ಪ್ರಾಯಾಣಿಕರಿಗೆ ಪ್ರಾಣ ಸಂಕಟ: ಎದೆ ಝಲ್​ ಎನಿಸುವ ದೃಶ್ಯ

Must read

ವಿಜಯಪುರ: ಅಪಾಯವನ್ನೂ ಲೆಕ್ಕಿಸದೇ ಚಾಲಕ ಜಲಾವೃತಗೊಂಡ ಸೇತುವೆ ಮೇಲೆ ಬಸ್​ ಚಲಾಯಿಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ನಡೆದಿದೆ.

ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಸಾತಿಹಾಳ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಹತ್ತಾರು ಪ್ರಯಾಣಿಕರಿದ್ದ ಸರ್ಕಾರಿ ಬಸ್​ ಅನ್ನು ಚಾಲಕ ಇದೇ ಸೇತುವೆ ಮೇಲೆ ಚಲಾಯಿಸಿ ನಿರ್ಲಕ್ಷ್ಯ ಮೆರೆದಿದ್ದಾನೆ.ಒಂದು ಹಂತದಲ್ಲಿ ಸೇತುವೆ ಬಿಟ್ಟು ವಾಲಿ ಬರುತ್ತಿದ್ದ ಬಸ್​ ನೋಡಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬಸ್​ ಸೇತುವೆ ಮೇಲೆ ಬರುವ ದೃಶ್ಯ ಎದೆ ಝಲ್​ ಎನಿಸುವಂತಿದ್ದು, ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಬಸ್ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Latest article