Monday, November 29, 2021

ಇಷ್ಟೆಲ್ಲಾ ಮಾಡುವ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ: ಪ್ರಮೋದ್​ ಮುತಾಲಿಕ್

Must read

ವಿಜಯಪುರ: ಇಷ್ಟೆಲ್ಲಾ ಮಾಡುವ ನಟ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ. ದಲಿತರ ಪರ ನಿಮ್ಮ ಕೊಡುಗೆ ಏನು? ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಪ್ರಶ್ನಿಸಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಂಸಲೇಖ ಅವರು ದೊಡ್ಡ ವ್ಯಕ್ತಿ. ಅಂತಹ ಶಬ್ದ ಮಾತನಾಡಬಾರದಿತ್ತು. ಆದರೂ ಮಾತನಾಡಿದ್ದಾರೆ, ಅದನ್ನು ಖಂಡಿಸಿದ್ದೇನೆ. ಅವರು ಕ್ಷಮೆ ಕೇಳಿದ್ದಾರೆ ಎಂದರು. ನಟ ಚೇತನ್ ಹಂಸಲೇಖ ಪರವಾಗಿ ನಿಲ್ಲುವ ವಿಚಾರವಾಗಿ ಪ್ರತಿಕ್ರಿಯಿಸಿ, ನಟ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ. ಅವರು ಇಂತಹುದೇ ಅವಕಾಶ ಕಾಯುತ್ತಿರುತ್ತಾರೆ ಎಂದರು.

 

Latest article