Monday, November 29, 2021

ಮುಸ್ಲಿಂಮರು ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಬನ್ನಿ : ಗೋವಿಂದ ಕಾರಜೋಳ ಕರೆ

Must read

ವಿಜಯಪುರ: ಮುಸ್ಲಿಂಮರ ಅಭಿವೃದ್ಧಿ ಕಾಂಗ್ರೆಸ್​ನಿಂದ ಆಗುವುದಿಲ್ಲ. ಹೀಗಾಗಿ, ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಬನ್ನಿ ಎಂದು ಸಚಿವ ಗೋವಿಂದ ಕಾರಜೋಳ ಕರೆ ನೀಡಿದ್ದಾರೆ.

ಸಿಂದಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರದಿಂದ ಮುಸ್ಲಿಂಮರು ಕಾಂಗ್ರೆಸ್​ಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಕುರುಡು ನಂಬಿಕೆ ಇಟ್ಟು ನೀವು ಅನಾಥರಾಗಿದ್ದೀರಿ. ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿಯತ್ತ ಬನ್ನಿ. ದೇಶದ ಅಭಿವೃದ್ಧಿಗೆ ಒತ್ತು ಕೊಡುವುದು ಬಿಜೆಪಿ ಪಕ್ಷ. ಮುಸ್ಲಿಂಮರ ಅಭಿವೃದ್ಧಿ ಕಾಂಗ್ರೆಸ್​ನಿಂದ ಆಗುವುದಿಲ್ಲ.

ಕಾಂಗ್ರೆಸ್​ ಮುಸ್ಲಿಂಮರನ್ನು ಕೇವಲ ಓಟ್​ ಬ್ಯಾಂಕ್​ ಮಾಡಿಕೊಂಡಿದೆ. ಮುಸ್ಲಿಂಮರಿಗೆ ನಾನು ಮನವಿ ಮಾಡುತ್ತೇನೆ. ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ಬನ್ನಿ. ರಾಜೀವ್​ ಗಾಂಧಿಯವರ ಆಪ್ತ ಆರಿಫ್ ಅಹ್ಮದ್ ಖಾನ್ ಅವರನ್ನು ಇಂದು ಕೇರಳದ ಗವರ್ನರ್ ಅನ್ನಾಗಿ ಮಾಡಿದ್ದು ಬಿಜೆಪಿ ಸರ್ಕಾರ. ದೇಶದ 26 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಿಂದಗಿ ಹಾಗೂ ಹಾನಗಲ್​ನಲ್ಲಿ ಎರಡೂ ಅಭ್ಯರ್ಥಿಗಳು 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.

Latest article