Monday, November 29, 2021

ನಾನು ಬಿಜೆಪಿ ಜೊತೆ ಸರ್ಕಾರ ಮಾಡುವಂತೆ ಮಾಡಿದ್ದೇ ಸಿದ್ದರಾಮಯ್ಯ: ಹೆಚ್​ಡಿಕೆ ಕಿಡಿ

Must read

ವಿಜಯಪುರ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು ಅಂತ ಕರ್ನಾಟಕ ಭವನದಲ್ಲಿ ರಗ್ಗು ಹೊದ್ದು ಮಲಗಿದ್ದರು. ಆಗ ಅವರನ್ನು ಕರೆದುಕೊಂಡು ಬಂದವನು ನಾನು. ಆಮೇಲೆ ಉಪ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗುವ ಹುಚ್ಚು ಎಂದು ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಜೊತೆ ಹೋಗಿ ಸರ್ಕಾರ ಮಾಡುವಂತೆ ಮಾಡಿದ್ದೇ ಸಿದ್ದರಾಮಯ್ಯ. ಆಗ ಸಿದ್ದರಾಮಯ್ಯ ಜೆಡಿಎಸ್ ಮುಗಿಸಲು ಅಹಿಂದ ಮಾಡಿದರು. ಜೆಡಿಎಸ್ ಉಳಿಸಲು ಅನಿವಾರ್ಯವಾಗಿ ಬಿಜೆಪಿ ಜೊತೆ ಕೈ ಜೋಡಿಸಿದೆ. ವಾಮನಾಚಾರ್ಯ, ಅಗ್ನಿ ಶ್ರೀಧರ್, ಅಭಿಮಾನಿ ಪ್ರಕಾಶನದ ಮಾಲೀಕರು ಅಂದು ಸಭೆ ಮಾಡಿದ್ದರು, ಅವರನ್ನು ಕೇಳಿ. ನವೀನ್ ಪಟ್ನಾಯಕ್ ಜೊತೆ ಒರಿಸ್ಸಾದಲ್ಲಿ ಮಾಡಿದಂತೆ ನಿಮ್ಮನ್ನೇ ಸಿಎಂ ಮಾಡ್ತೀವಿ ಅಂತ ಹೇಳಿ ಬಿಜೆಪಿಯವರೇ ದುಂಬಾಲು ಬಿದ್ದರು ಎಂದರು.

ಸಿದ್ದರಾಮಯ್ಯನಂತವರು ಟೋಪಿ ಹಾಕಿ ಹೋದರೂ, ಚೂರಿ ಹಾಕಿ ಹೋದರೂ ಸಹ ಜೆಡಿಎಸ್ ಉಳಿದಿದ್ದು ನಾನು ಸಿಎಂ ಆಗಿ ಮಾಡಿರುವ ಕೆಲಸಗಳಿಂದ. ಮೈತ್ರಿ ಸರ್ಕಾರ ಬೀಳುವಾಗ ನಾನು ಅಮೆರಿಕಾದಲ್ಲಿ ಇದ್ದೆ. ಜಾರ್ಜ್ ಹಾಗೂ ಭೈರತಿ ಬಸವರಾಜ್ ನಡುವೆ ಒಂದು ಗಲಾಟೆ ಶುರುವಾಯ್ತು. ಆಗ ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಉಳಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ.

ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿರುವ ನಿಮ್ಮದ್ಯಾವ ಜಾತ್ಯಾತೀತತೆ ಸಿದ್ದರಾಮಯ್ಯನವರೇ? ಸಂಪುಟ ಸಂಪೂರ್ಣ ಪುನರ್ ರಚನೆ ಮಾಡೋಣ ಅಂತ ನಾನು ಹೇಳಿದಾಗ ಸಿದ್ದರಾಮಯ್ಯ ಅಂದು ಟವಲ್ ಕೊಡವಿ ಹೆಗಲ ಮೇಲೆ ಹಾಕಿಕೊಂಡು ಎದ್ದು ಹೋದರು. ಸಿದ್ದರಾಮಯ್ಯನವರೇ ನನ್ನ ರಾಜಗುರುಗಳು ಎನ್ನುವ ವ್ಯಕ್ತಿಯೇ ಅಂದು ನನಗೆ ಫೋನ್ ಮಾಡಿ, ಗೋಪಾಲಯ್ಯನನ್ನ ನಾನೇ ಕಳುಹಿಸಿದ್ದೇನೆ ಅಂತ ಬೆದರಿಕೆ ಹಾಕಿದ್ದರು ಎಂದು ವಾಗ್ದಾಳಿ ನಡೆಸಿದರು.

 

 

Latest article