Monday, November 29, 2021

ಕಣ್ಣೀರ ಟೀಕೆಗೆ ಮತ್ತೆ ಕಣ್ತುಂಬಿಕೊಂಡೇ ಉತ್ತರ ಕೊಟ್ಟ ಹೆಚ್​ಡಿಕೆ

Must read

ವಿಜಯಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರ ಟೀಕೆಗೆ ಮತ್ತೆ ಕಣ್ತುಂಬಿಕೊಂಡೇ ಉತ್ತರ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಕರ್ಚೀಫ್​ಗೆ ಗ್ಲಿಸರಿನ್​ ಹಾಕಿಕೊಂಡು ಅಳ್ತಾರೆ ಎಂಬ ಟೀಕೆಗೆ ಪ್ರತ್ಯುತ್ತರ ನೀಡಿದ ಹೆಚ್​ಡಿಕೆ, ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ. ಕರ್ಚೀಫ್​ಗೆ ಗ್ಲಿಸರಿನ್​ ಹಾಕಿಕೊಂಡು ಅಳ್ತಾರೆ ಅನ್ನೋದೆಲ್ಲ ಈ ಹಿಂದೆಯೇ ಹೇಳಿ ಬಿಟ್ಟಿದ್ದಾರೆ ಎಂದು ಗದ್ಗದಿತರಾದರು.

ಹೆಚ್​ಡಿಕೆ ನಿನ್ನೆ ಗುಬ್ಬಿ ಸಮಾವೇಶದಲ್ಲಿ ಭಾಷಣ ಮಾಡುವ ವೇಳೆ, ಇಸ್ರೇಲ್​ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ-ತಾಯಿಯ ಆರ್ಶೀವಾದದಿಂದ ನಾನು ಉಳಿದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು.

Latest article