Tuesday, August 16, 2022

ಅಪರಿಚಿತನ ಬೈಕ್​​ನಿಂದ ಬಿದ್ದು ಆಶಾ ಕಾರ್ಯಕರ್ತೆ ಸಾವು..!

Must read

ವಿಜಯಪುರ: ಬೈಕ್​ದಿಂದ ಬಿದ್ದು ಆಶಾ ಕಾರ್ಯಕರ್ತೆ ಸಾವನ್ನಪ್ಪಿರುವ ಘಟನೆ ‌ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾರನಾಳ ಕ್ರಾಸ ಬಳಿ ನಡೆದಿದೆ. ಬೋರಮ್ಮ ಡೋರನಳ್ಳ (48) ಮೃತ ದುರ್ದೈವಿ.

ಮೂಲತಃ ಮುದ್ದೇಬಿಹಾಳ ತಾಲೂಕಿನ ಗುಡಿಹಾಳ ಗ್ರಾಮದ ಬೋರಮ್ಮ, ಮಡಿಕೇಶ್ವರ ಗ್ರಾಮದಿಂದ ತಾರನಾಳ ಕ್ರಾಸ್​​ವರೆಗೆ ಅಪರಿಚಿತನ ಬೈಕ್​ನಲ್ಲಿ ಡ್ರಾಪ್​ ಪಡೆದುಕೊಂಡಿದ್ದಾರೆ. ತಾರನಾಳ ಕ್ರಾಸ್ ಬಳಿ ಬರುತ್ತಿದ್ದಂತೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಬಳಿಕ ಬೈಕ್​ ಸವಾರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮುದ್ದೇಬಿಹಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest article