Tuesday, November 29, 2022

ಆಫ್ರಿಕಾದಿಂದ ಹೊಸಪೇಟೆಗೆ ಬಂದಿದ್ದ ಇಬ್ಬರ ಕೋವಿಡ್​ ವರದಿ ನೆಗೆಟಿವ್

Must read

ವಿಜಯನಗರ: ಒಮಿಕ್ರಾನ್​ ವೈರಸ್​ ಅಬ್ಬರ ಹೆಚ್ಚಾಗಿರುವ ಆಫ್ರಿಕಾದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಬಂದಿದ್ದ ಇಬ್ಬರ ಕೋವಿಡ್​ ವರದಿ ನೆಗೆಟಿವ್ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಹೊಸಪೇಟೆಯ ಟಿಹೆಚ್​ಒ ಡಾ. ಭಾಸ್ಕರ್, ಇಬ್ಬರು ಆಫ್ರಿಕಾದ ಗಿನಿ ಪ್ರದೇಶದಿಂದ ಬಂದಿದ್ದಾರೆ. ಇಬ್ಬರು ಬಂದಿರೋದು ಗೊತ್ತಾಗಿ ಅವರಿಬ್ಬರ RAT ಮತ್ತು RTPCR ಟೆಸ್ಟ್ ಮಾಡಲಾಗಿದೆ. ಇಬ್ಬರ ವರದಿಗಳೂ ಸಹ ನೆಗೆಟಿವ್ ಇದೆ. ರಾಜ್ಯ ಸರ್ಕಾರದ ಗೈಡ್​ಲೈನ್ಸ್​ ಪ್ರಕಾರ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಾವು ತಪಾಸಣೆ ಮಾಡಿದ್ದೇವೆ. ಸದ್ಯ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಅವರ ಕುಟುಂಬ ಸದಸ್ಯರ ಮೇಲೂ ನಿಗಾ ವಹಿಸಲಾಗಿದೆ.

ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ. 7 ದಿನದ ನಿಗಾ ಮುಗಿದ ನಂತರ ಅವರಿಗೆ ಮತ್ತೆ ಆರ್​ಟಿಪಿಸಿಆರ್​ ಪರೀಕ್ಷೆ ಮಾಡಲಾಗುತ್ತೆ. ಆ ಸಮಯದಲ್ಲಿ ಪಾಸಿಟಿವ್ ಬಂದ್ರೆ ಜಿನೋಮಿಕ್ ಸಿಕ್ವೇಸಿಂಗ್ ಟೆಸ್ಟ್​ಗೆ ಕಳಿಸಲಾಗುತ್ತದೆ. ಅದರಲ್ಲಿ ಏನಾದರೂ ಕಂಡುಬಂದ್ರೆ ಅದನ್ನು ಒಮಿಕ್ರಾನ್ ಅಂತ ಪರಿಗಣಿಸಬಹುದು. ಸದ್ಯ ಆಫ್ರಿಕಾದ ಗಿನಿ ದೇಶದಿಂದ ಬಂದಿರುವವರಲ್ಲಿ ಒಮಿಕ್ರಾನ್​ ಲಕ್ಷಣಗಳಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿರುವ ಪ್ರವಾಸಿಗರಿದ್ರೆ, ಬಂದು ಟೆಸ್ಟ್ ಮಾಡಿಸಿಕೊಳ್ಳಿ. ಒಂದು ವೇಳೆ ಅನುಮಾನ ಬಂತು ಅನ್ನೋದಾದ್ರೆ ನಮಗೆ ಮಾಹಿತಿ ಕೊಡಿ ಎಂದರು.

Latest article