ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯ ಅನುದಾನವಿಲ್ಲದೆ ಬರಿದಾಗಿದೆ. ವಿವಿಗೆ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಕ್ರೂಢೀಕೃತ ನೌಕರರಿಗೆ ವೇತನ ನೀಡಲು ವಿವಿ ಬಳಿ ಹಣವಿಲ್ಲದಂತಾಗಿದೆ.
ಜ್ಞಾನಪೀಠ ಪುರಸ್ಕೃತ ಡಾ ಚಂದ್ರಶೇಖರ್ ಕಂಬಾರ್ ಅವರ ಕನಸಿನ ಹಂಪಿಯ ಬಳಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಕೊಡುತ್ತಿರುವ ಅನುದಾನ ಸಾಕಾಗ್ತಿಲ್ಲ. ಕನ್ನಡ ನಾಡು-ನುಡಿ-ಭಾಷೆ ಬೆಳವಣಿಗೆಗಾಗಿ ಇರುವ ಏಕೈಕ ದೇಶದ ವಿವಿಯೆಂದರೆ ಅದು ಕನ್ನಡ ವಿಶ್ವವಿದ್ಯಾಲಯವೇ. ಆದರೆ, ರಾಜ್ಯ ಸರ್ಕಾರ ವಿವಿ ಅಭಿವೃದ್ಧಿಗಾಗಿ ನೀಡುವ ಅನುದಾನ ಹೇಳಿಕೊಳ್ಳಲಿಕ್ಕೂ ಸಾಕಾಗ್ತಿಲ್ಲ.
ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಸಿಬ್ಬಂದಿ ಸಂಕಷ್ಟದಲ್ಲಿದ್ದಾರೆ. ಪ್ರತಿರ್ಷ ಕನಿಷ್ಠ ಆರು ಕೋಟಿಯಾದರೂ ವಿವಿ ಅಭಿವೃದ್ಧಿಗೆ ಬೇಕು. ಆದರೆ, ಸರ್ಕಾರ ಒಂದು ಇಲ್ಲವೇ, ಎರಡು ಕೋಟಿ ನೀಡುತ್ತಿದೆ. ಇದರಿಂದ ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲೂ ಸಾಧ್ಯವಾಗುತ್ತಿಲ್ಲ.