ವಿಜಯನಗರ: ಒಮಿಕ್ರಾನ್ ವೈರಸ್ ಅಬ್ಬರ ಹೆಚ್ಚಾಗಿರುವ ಆಫ್ರಿಕಾದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಇಬ್ಬರು ಆಗಮಿಸಿದ್ದಾರೆ.
ಈ ಇಬ್ಬರು ಶುಕ್ರವಾರ ಆಫ್ರಿಕಾದಿಂದ ಮುಂಬೈಗೆ ಆಗಮಿಸಿದ್ದರು. ಮುಂಬೈನಿಂದ ಹೊಸಪೇಟೆಗೆ ಖಾಸಗಿ ಬಸ್ನಲ್ಲಿ ಶನಿವಾರ ಆಗಮಿಸಿದ್ದಾರೆ. ಹೀಗಾಗಿ, ಬಳ್ಳಾರಿ ಹಾಗೂ ವಿಜಯನಗರ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
ಇಬ್ಬರನ್ನೂ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಿ, ಪ್ರತ್ಯೇಕವಾಗಿ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಜೊತೆಗೆ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಇಬ್ಬರು ಕ್ರಾಂಟ್ರ್ಯಾಕ್ಟ್ ಬೇಸ್ ಕೆಲಸದ ಮೇಲೆ ಆಫ್ರಿಕಾಕ್ಕೆ ತೆರಳಿದ್ದರು.