Tuesday, October 26, 2021

ಟ್ರಾಫಿಕ್​ ಪೊಲೀಸರಿಗೆ ಕೆಟ್ಟ ಸನ್ನೆ ಮಾಡಿದ್ದ ಯುವಕನಿಂದ ಕೈ ಮುಗಿದು ಕ್ಷಮೆಯಾಚನೆ

Must read

ಬೆಂಗಳೂರು: ಬುದ್ದಿಮಾತು ಹೇಳಿದ ಪೊಲೀಸರಿಗೆ ಕೆಟ್ಟ ಸನ್ನೆ ಮಾಡಿದ ಯುವಕ ಕೊನೆಗೂ ಪೊಲೀಸರ ಮುಂದೆ ಕ್ಷಮೆಯಾಚಿಸಿದ್ದಾನೆ.

ಬಾಣಸವಾಡಿ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬಂದ ಯುವಕನಿಗೆ ಟ್ರಾಫಿಕ್​ ಪೊಲೀಸರು ಬುದ್ದಿ ಹೇಳಿದ್ದಾರೆ. ಹೆಲ್ಮೆಟ್​ ಧರಿಸುವಂತೆ ತಿಳಿಸಿ ರೂಲ್ಸ್ ವೈಲೇಷನ್​ಗೆ ಫೋಟೊ ಕ್ಲಿಕ್ಕಿಸಿದ್ದಾರೆ. ಈ ವೇಳೆ ಯುವಕ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡಿದ್ದಾನೆ.

ಈ ಫೋಟೋ ಸೋಶಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಟ್ರಾಫಿಕ್​ ಪೊಲೀಸರು ಬಾಣಸವಾಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಯುವಕನನ್ನು ಪತ್ತೆ ಮಾಡಿದ್ದು, ಕುಚೇಷ್ಟೆ ಮೆರೆದ ಯುವಕನಿಗೆ 1500 ರೂಪಾಯಿ ದಂಡ ವಿಧಿಸಿ, ಮತ್ತೆ ಈ ರೀತಿಯ ಕೃತ್ಯ ಎಸಗದಂತೆ ಬುದ್ದಿ ಮಾತು ಹೇಳಿ, ಬಿಟ್ಟು ಕಳುಹಿಸಿದ್ದಾರೆ.

More articles

Latest article