Monday, November 29, 2021

ಭಾರತದಲ್ಲಿ ವಿಶ್ವದ ಅತೀ ದೊಡ್ಡ ಹಾವು ಪತ್ತೆ..ಇಲ್ಲಿದೆ ಸತ್ಯಾಸತ್ಯತೆ..!

Must read

ಇತ್ತೀಚೆಗಷ್ಟೆ ಆನ್ಲೈನ್​ನಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ ಬೃಹತ್ ಹಾವನ್ನು ಜೆಸಿಬಿ ಯಂತ್ರದ ಮೂಲಕ ಕಾಡಿನಿಂದ ಹೊರತೆಗೆಯುತ್ತಿದ್ದ ವೀಡಿಯೋ ವೈರಲ್​ ಆಗಿತ್ತು. ಈ ವೀಡಿಯೊ ಕಳೆದ ಎರಡು ವಾರಗಳಿಂದ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ ಮತ್ತು ಅದರ ಗಾತ್ರವು ಲಕ್ಷಾಂತರ ಜನರನ್ನು ಆಶ್ಚರ್ಯಚಕಿತ ಗೊಳಿಸಿತ್ತು.

ಈ ತಿಂಗಳ ಆರಂಭದಲ್ಲಿ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗಿನಿಂದ, ಅನೇಕ ವೆಬ್ಸೈಟ್​ಗಳು ಜಾರ್ಖಂಡ್ ನಲ್ಲಿ ವಿಶ್ವದ ಅತೀ ದೊಡ್ಡ ಹಾವು ಕಾಣಿಸಿಕೊಂಡಿದೆ ಎಂದು ವರದಿ ಮಾಡಿದ್ದವು. ಜಾರ್ಖಂಡ್ ನ ಧನ್ ಬಾದ್ನ ಎಫ್ ಸಿಐ ಸಿಂಡ್ರಿಯಲ್ಲಿ ಬೃಹತ್ ಹಾವು ಪತ್ತೆಯಾಗಿದೆ ಎಂಬ ಹೆಡ್​ಲೈನ್ ಇದ್ದ ಈ ವೀಡಿಯೊ  ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್ ಆಗಿದೆ.

ಅಷ್ಟೇ ಅಲ್ಲದೇ ರಾಜ್ಯಸಭಾ ಸದಸ್ಯ ಪರಿಮಲ್ ನಾಥ್ವಾನಿ ಈ ಕ್ಲಿಪ್​ನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಜಾರ್ಖಂಡ್ ನ ಧನ್ ಬಾದ್​ನಲ್ಲಿ 100 ಕೆಜಿ ಮತ್ತು 6.1 ಮೀಟರ್ ತೂಕದ ಹಾವನ್ನು ಸರಿಸಲು ಕ್ರೇನ್ ಬಳಸಲಾಯ್ತು ಎಂದು ಪೋಸ್ಟ್​ ಮಾಡಿದ್ದರು.

 

Latest article