Monday, November 29, 2021

ಮೂರು ತಿಂಗಳ ನಂತರವೂ ಆಗುವ ಗರ್ಭಪಾತಕ್ಕೆ ಕಾರಣ ತಿಳಿಯಿರಿ

Must read

ತಜ್ಞ ವೈದ್ಯರ ಪ್ರಕಾರ 8 ಗರ್ಭಿಣಿ ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಗರ್ಭಾವಸ್ಥೆಯ 24 ವಾರಗಳಲ್ಲಿ ಗರ್ಭದಲ್ಲಿರುವ ಭ್ರೂಣದ ನಾಶವನ್ನು ವೈದ್ಯಕೀಯ ಭಾಷೆಯಲ್ಲಿ ಗರ್ಭಪಾತ ಎಂದು ಕರೆಯಲಾಗುತ್ತದೆ ಇದಲ್ಲದೆ ಗರ್ಭಧಾರಣೆಯಾದ ಮೊದಲ ಮೂರರಿಂದ ನಾಲ್ಕು ತಿಂಗಳಲ್ಲಿ ಆಗುವ ಗರ್ಭಪಾತಕ್ಕೆ ಹಲವು ಕಾರಣಗಳಿರುತ್ತದೆ.

ಸುಮಾರು ಎರಡರಿಂದ ಐದು ಪ್ರತಿಶತದಷ್ಟು ಗರ್ಭಪಾತಗಳಿಗೆ ಅನುವಂಶೀಯ ಕಾರಣಗಳೇ ಪುನರಾವರ್ತಿತ ಗರ್ಭಪಾತ ಅಥವಾ ವಿಳಂಬಿತ ಗರ್ಭಪಾತಕ್ಕೆ ಹಲವು ಕಾರಣಗಳಿರಬಹುದು ಎಂದು ತಜ್ಞರು ಹೇಳುತ್ತಾರೆ. ರಕ್ತ ಹೆಪ್ಪುಗಟ್ಟುವ ಅಸ್ವಸ್ಥತೆ, ಥೈರಾಯ್ಡ್ ಸಮಸ್ಯೆ, ಗರ್ಭಾಶಯದ ದೌರ್ಬಲ್ಯ ಅಥವಾ ನಮ್ಮ ಜೀವನ ಶೈಲಿ ಎಲ್ಲವೂ ಕೂಡ ಕಾರಣ ಎಂದು ಹೇಳುತ್ತಾರೆ ತಜ್ಞವೈದ್ಯರು . ಇನ್ನು ವಯಸ್ಸಾದಂತೆ ಮಹಿಳೆಯರಲ್ಲಿ ದೈಹಿಕ ಶಕ್ತಿ ಹಾಗೂ ಗರ್ಭದಾರಣೆಯ ಶಕ್ತಿ ಕುಂದುತ್ತಾ ಸಾಗುತ್ತದೆ ಅಂದರೆ 35 ವರ್ಷಗಳು ಕಳೆದಂತೆ ಈ ಸಮಸ್ಯೆ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ.

ನಿಮಗೆ ತಿಳಿದಿರಲಿ ಬಟ್ಟೆಯ ಮೇಲೆ ರಕ್ತಸ್ರಾವ ರಕ್ತದ ಗುರುತುಗಳು ಗರ್ಭಪಾತದ ಸಂಕೇತವಾಗಬಹುದು , ಗರ್ಭದಾರಣೆಯ ಮೊದಲ ದಿನದಿಂದಲೂ ನಿಗಾ ವಹಿಸುವುದು ಅತೀ ಅಗತ್ಯ ವೈದ್ಯರು ಹೇಳುವ ಪ್ರಕಾರ ಮಹಿಳೆಯರ ಮಾನಸಿಕ ಸ್ಥಿತಿ ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

Latest article