ಯಾದಗಿರಿ: ಪೊಲೀಸ್ ಭದ್ರತೆಯಲ್ಲಿ ದಲಿತ ಮಹಿಳೆಯರು ದೇವಾಲಯ ಪ್ರವೇಶ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದಲ್ಲಿ ನಡೆದಿದೆ.
ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಎಸಿ ಶ್ಯಾಲಂ ಹುಸೇನ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸ್ ಭದ್ರತೆಯೊಂದಿಗೆ ಐದು ದಲಿತ ಮಹಿಳೆಯರು ಅಂಬಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.
ಮೂಲತಃ ಅಂಬಲಿಹಾಳ ಗ್ರಾಮದ ದಲಿತರು ಸುಮಾರು ವರ್ಷಗಳಿಂದ ಮಾವಿನಹಾಳ ಗ್ರಾಮದಲ್ಲಿ ವಾಸವಿದ್ದು,ಆಂಜನೇಯ ಭಕ್ತರಾಗಿದ್ದದ್ದಾರೆ. ಶನಿವಾರ, ಅಮಾವಾಸ್ಯೆ ಹಾಗೂ ವಿವಿಧ ಕಾರ್ಯಕ್ರಮದ ವೇಳೆ ದೇಗುಲ ದರ್ಶನ ಪಡೆಯಲು ಮುಂದಾಗಿದ್ದರು. ಇದಕ್ಕೆ ಅಂಬಲಿಹಾಳ ಗ್ರಾಮದ ಇತರ ಜಾತಿಯ ಜನರು ವಿರೋಧ ಮಾಡಿದ್ದರು ಎನ್ನಲಾಗಿದೆ.
ಮೇ 22 ರಂದು ದಲಿತ ಮುಖಂಡರು ಇತರ ಜಾತಿಯ ಮುಖಂಡರನ್ನು ಭೇಟಿಯಾಗಿದ್ದು, ಆಂಜನೇಯ ಗುಡಿಗೆ ಪ್ರವೇಶ ಮಾಡಿ ಜಾತ್ರೆ ಮಾಡುತ್ತೆವೆಂದು ಹೇಳಿದ್ದರು. ಆದರೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಮಾವಿನಹಾಳ ಗ್ರಾಮದ ದಲಿತ ಮುಖಂಡರು, ಅಂಬಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ದಲಿತ ಮುಖಂಡರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಪೊಲೀಸ್ ಭದ್ರತೆ ನಡುವೆ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ