Monday, November 29, 2021

ಮರೆಯಲಾಗದ ಮೈಸೂರು: ಅರಸರಲ್ಲದೇ ಅಂಬಾರಿಯ ಮೇಲೆ ಕುಳಿತ ಆ ವ್ಯಕ್ತಿ ಯಾರು..?

Must read

ಮೈಸೂರು ದಸರಾ ಇತಿಹಾಸವನ್ನ ಮೆಲುಕು ಹಾಕುವಾಗ ಒಂದು ಘಟನೆಯನ್ನ ನೆನಪು ಮಾಡಿಕೊಳ್ಳಲೇಬೇಕು. ಆ ಘಟನೆ ನಡೆದದ್ದು 1936ರಲ್ಲಿ. ಆ ವರ್ಷ ದಸರಾ ಹಬ್ಬದ ಜಂಬೂ ಸವಾರಿಯ ವೇಳೆ ಮೈಸೂರಿನ ಜನರ ಆಕ್ರೋಶದ ಕಟ್ಟೆ ಒಡೆದು ಹೋಗಿತ್ತು. ಯಾವ ಮಟ್ಟಿಗೆ ಅಂದ್ರೆ, ಅಂಬಾರಿ ಮೇಲೆ ಮಹಾರಾಜರು ಕುಳಿತಿದ್ದರೂ, ಜನ ಆನೆಯನ್ನೇ ಕೆಳಗೆ ಉರುಳಿಸೋಕೆ ಮುಂದಾಗಿದ್ದರು.. ಮಹಾರಾಜರನ್ನೂ ಲೆಕ್ಕಿಸದೇ ಆನೆಯನ್ನ ತಡೆದು ನಿಲ್ಲಿಸೋಕೆ ಹೊರಟಿದ್ದರು. ಅದಕ್ಕೆ ಕಾರಣವಾಗಿದ್ದು ಓರ್ವ ವ್ಯಕ್ತಿ. ಆ ವ್ಯಕ್ತಿ ಯಾರು? ಮಹಾರಾಜರನ್ನ ದೇವರಂತೆ ಆರಾಧಿಸುತ್ತಿದ್ದ ಮೈಸೂರಿನ ಪ್ರಜೆಗಳು ಅದ್ಯಾಕೆ ಅಂಬಾರಿ ಹೊತ್ತ ಆನೆಯನ್ನ ಬೀಳಿಸೋಕೆ ಮುಂದಾಗಿದ್ರು ಅನ್ನೋ ರೋಚಕ ಸ್ಟೋರಿ ಇಲ್ಲಿದೆ.

ಮೈಸೂರು ದಸರಾ ಬಗ್ಗೆ ಹೇಳುವಾಗ.. ಜಂಬೂ ಸವಾರಿಯ ನೆನಪು ಕಾಡಿದಾಗ.. ಆ ಒಂದು ರೋಚಕ ಘಟನೆಯ ಬಗ್ಗೆ ಹೇಳಲೇಬೇಕು. ಯಾಕಂದ್ರೆ, ಅದು ಎಂದಿಗೂ ಮರೆಯಲಾಗದ ಘಟನೆ. ಇತಿಹಾಸ ಪುಟಗಳ ಮರೆಯಲ್ಲಿ ಸೇರಿಕೊಂಡಿರುವ ಘಟನೆ. ಮೈಸೂರಿನ ಜನ ತಮ್ಮ ಮಹಾರಾಜರನ್ನ ಅದೆಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಆ ಘಟನೆ. ಅದೇ ಥರ, ಮಹಾರಾಜರು ಓರ್ವ ಆಪ್ತಮಿತ್ರನಿಗೆ ಅದೆಂಥಾ ಗೌರವ ಕೊಟ್ಟಿದ್ದರು ಎನ್ನುವುದಕ್ಕೂ ಆ ಘಟನೆಯೇ ಸಾಕ್ಷಿ.

ನಿಮಗೆ ಗೊತ್ತಿದೆಯೋ ಇಲ್ವೋ. ಹಿಂದೆಲ್ಲಾ ಜಂಬೂ ಸವಾರಿಯಲ್ಲಿ ಸ್ವತಃ ಮೈಸೂರು ರಾಜರೇ ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತು ಮೆರವಣಿಗೆ ಬರುತ್ತಿದ್ದರು. ರಾಜರ ಮೆರವಣಿಗೆಯನ್ನ ನೋಡಲು ಮೈಸೂರಿಗೆ ಮೈಸೂರೇ ನೆರೆಯುತ್ತಿತ್ತು. ಸ್ವಾತಂತ್ರ್ಯ ನಂತರದಲ್ಲಿ ಮಹಾರಾಜರು ಜಂಬೂ ಸವಾರಿಯ ಮೆರವಣಿಗೆಯಲ್ಲಿ ಕೂರುವುದನ್ನ ನಿಲ್ಲಿಸುತ್ತಾರೆ. ಆಗಲೇ ಆನೆಯ ಮೇಲೆ ನಾಡದೇವತೆ ಚಾಮುಂಡೇಶ್ವರಿಯನ್ನ ಕೂರಿಸಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭವಾಗಿದ್ದು.

ನಾಲ್ವಡಿಯವಯರು ಕುಳಿತಿದ್ದರೂ ಜನತೆ ದಾಳಿ ಮಾಡಿದ್ದೇಕೆ..?

ಮೈಸೂರಿನ ಇತಿಹಾಸದಲ್ಲಿ ಮಹಾರಾಜರನ್ನ ಹೊರತುಪಡಿಸಿ, ರಾಜವಂಶಸ್ಥರನ್ನ ಹೊರತುಪಡಿಸಿ ಬೇರೆ ಯಾರೊಬ್ಬರೂ ಅಂಬಾರಿಯ ಮೇಲೆ ಕುಳಿತಿಲ್ಲ. ಕುಳಿತುಕೊಳ್ಳಲು ಮೈಸೂರಿನ ಜನ ಅವಕಾಶವನ್ನೂ ಕೊಟ್ಟಿಲ್ಲ. ಆದ್ರೆ ಅದೊಂದು ಬಾರಿ ಅಂಥಾದ್ದೊಂದು ಘಟನೆ ನಡೆದು ಹೋಗುತ್ತೆ. ಆಪ್ತಮಿತ್ರನ ಮೇಲೆ ಮೈಸೂರು ಮಹಾರಾಜರಿಗಿದ್ದ ಅತಿಯಾದ ಪ್ರೇಮವೋ ಅಥವಾ ಸ್ನೇಹಕ್ಕೆ ಅವರು ಕೊಟ್ಟ ಗೌರವವೋ ಗೊತ್ತಿಲ್ಲ. ಮುಸ್ಲಿಂ ಧರ್ಮಕ್ಕೆ ಸೇರಿದ್ದ ವ್ಯಕ್ತಿಯೊಬ್ಬರು ಮಹಾರಾಜರ ಜೊತೆಯಲ್ಲೇ ಅಂಬಾರಿಯ ಮೇಲಿನ ಸಿಂಹಾಸನದಲ್ಲಿ ಕುಳಿತುಬಿಡ್ತಾರೆ. ಜಂಬೂ ಸವಾರಿ ಕೂಡ ಹೊರಟುನಿಲ್ಲುತ್ತೆ. ಅರಮನೆಯಿಂದ ಶುರುವಾದ ಜಂಬೂ ಸವಾರಿ ಒಂದಿಷ್ಟು ದೂರ ಬಂದಿರಲಿಲ್ಲ. ಅಂಬಾರಿ ಮೇಲೆ ಕುಳಿತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನ ಕಂಡು ಮೈಸೂರಿನ ಜನತೆ ರೊಚ್ಚಿಗೆದ್ದು ಬಿಡ್ತಾರೆ.

ಅಂಬಾರಿಯ ಮೇಲೆ ರಾಜರನ್ನ ಹೊರತುಪಡಿಸಿ ಬೇರೆ ಯಾರೇ ಕುಳಿತರೂ ಜನತೆ ಅದನ್ನ ಸಹಿಸುತ್ತಿರಲಿಲ್ಲ. ಹೀಗಿರುವಾಗ ಮುಸ್ಲಿಂ ಧರ್ಮೀಯರೊಬ್ಬರು, ರಾಜರ ಜೊತೆಯಲ್ಲಿ, ರಾಜರಿಗೆ ಸಮನಾಗಿ ಅಂಬಾರಿ ಮೇಲೆ ಕುಳಿತದ್ದನ್ನ ಕಂಡ ಮೈಸೂರಿನ ಜನ ರೊಚ್ಚಿಗೆದ್ದರು. ಗುಂಪು ಗುಂಪಾಗಿ ಬಂದು ಅಂಬಾರಿಯನ್ನು ಹೊತ್ತ ಆನೆಯನ್ಣೇ ಬೀಳಿಸಲು ಮುಂದಾದರು. ಪೊಲೀಸರು ಎಷ್ಟೇ ಹರಸಾಹಸಪಟ್ಟರೂ ಜನರನ್ನ ತಡೆಯೋಕೆ ಸಾಧ್ಯವಾಗೋದೇ ಇಲ್ಲ. ಸ್ವಲ್ಪ ಎಡವಟ್ಟು ಆಗಿದ್ರೂ ಆವತ್ತು ಅಂಬಾರಿ ಹೊತ್ತ ಆನೆಯ ಜೊತೆಯಲ್ಲಿ ಮಹಾರಾಜರು ಕೂಡ ಕೆಳಕ್ಕುರುಳಿಬಿಡುತ್ತಿದ್ದರು.

ಅರಸರಲ್ಲದೇ ಅಂಬಾರಿಯ ಮೇಲೆ ಕುಳಿತ ಆ ವ್ಯಕ್ತಿ ಯಾರು..?

Also read:  ಮುಸ್ಲಿಂ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಿಸಲು ಮಹಾರಾಷ್ಟ್ರದಲ್ಲಿ ಸಲ್ಮಾನ್​ ಖಾನ್​ ವ್ಯಾಕ್ಸಿನ್​ ಜಾಗೃತಿ ಅಭಿಯಾನ.

ಅಕಸ್ಮಾತ್ ಆವತ್ತು​ ಸ್ವಲ್ಪ ಹೆಚ್ಚುಕಡಿಮೆ ಆಗಿದ್ರೂ ದೊಡ್ಡ ಅವಘಡವೇ ಸಂಭವಿಸಿಬಿಡುತ್ತಿತ್ತು. ಅಷ್ಟಕ್ಕೂ ಮಹಾರಾಜರ ಜೊತೆಯಲ್ಲಿ ಅಂಬಾರಿಯಲ್ಲಿ ಕುಳಿತ ಆ ಮುಸ್ಲಿಂ ವ್ಯಕ್ತಿ ಯಾರು ಅಂತೀರಾ. ಅದು ಇವರೇ.. ಕನ್ನಡನಾಡು ಎಂದಿಗೂ ಮರೆಯಲಾಗದ ವ್ಯಕ್ತಿ.. ಕರ್ನಾಟಕಕ್ಕೆ ಮರೆಯಲಾಗದ ಕೊಡುಗೆಗಳನ್ನ ನೀಡಿದ ಮಹಾನ್​ ಚೇತನ.. ಮೈಸೂರು ಮಹಾರಾಜರ ಆಪ್ತಮಿತ್ರ.. ಹಾಗೂ ಮೈಸೂರು ಸಂಸ್ಥಾನದಲ್ಲಿ 15 ವರ್ಷಗಳ ಕಾಲ ದೀವಾನರಾಗಿ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡ ಸರ್​ ಮಿರ್ಜಾ ಇಸ್ಮಾಯಿಲ್​.

Also read:  ದೇಶದಲ್ಲಿ 26,727 ಹೊಸ ಕೋವಿಡ್​ ಪ್ರಕರಣಗಳು ಪತ್ತೆ

ಸರ್​.ಮಿರ್ಜಾ ಇಸ್ಮಾಯಿಲ್​.. ಈ ಹೆಸರನ್ನ ನೀವೆಲ್ಲಾ ಕೇಳಿರ್ತೀರಾ.. ಪುಸ್ತಕಗಳಲ್ಲಿ ಓದಿರ್ತೀರಾ.. ಮೈಸೂರು ಇತಿಹಾಸದಲ್ಲಿ ಈ ಹೆಸರನ್ನ ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ.. ಆದರೆ ನಮ್ಮನ್ನ ಆಳುತ್ತಿರುವವರು ಮಿರ್ಜಾ ಇಸ್ಮಾಯಿಲ್ ಅವರ ಹೆಸರನ್ನ ನೆನಪಿನಲ್ಲಿ ಉಳಿಯುವಂತೆ ಮಾಡದೇ ಇರುವುದು ದುರಂತ.. ಈ ಮಿರ್ಜಾ ಇಸ್ಮಾಯಿಲ್ ಅವರಿಗೂ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರಿಗೂ ಬಾಲ್ಯದ ನಂಟು.. ಅವರಿಬ್ಬರ ಕಾಲದಲ್ಲಿ ಮೈಸೂರು ಸಂಸ್ಥಾನ ಅಕ್ಷರಶಃ ರಾಮರಾಜ್ಯವೇ ಆಗಿ ಹೋಗಿತ್ತು.

ಸರ್​ ಮಿರ್ಜಾ ಇಸ್ಮಾಯಿಲ್​.. ಇವರು ಪರ್ಷಿಯಾದಿಂದ ವ್ಯಾಪಾರ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಪ್ರಸಿದ್ಧ ವ್ಯಾಪಾರಿ ಆಲಿ ಅಸ್ಗರ್ ಅವರ ಮೊಮ್ಮಗ. ತಂದೆ ಆಗಾಖಾನ್​ ಅವರು ಮಹಾರಾಜ ಚಾಮರಾಜ ಒಡೆಯರ್​ ಅವರ ಅಂಗರಕ್ಷಕರಾಗಿದ್ದರು. ರಾಜಪರಿವಾರಕ್ಕೂ ಮಿರ್ಜಾ ಇಸ್ಮಾಯಿಲ್​ ಅವರ ಕುಟುಂಬಕ್ಕೂ ನಿಕಟ ಸಂಬಂಧವಿತ್ತು. ಹೀಗಾಗಿ ಚಾಮರಾಜ ಒಡೆಯರ್ ಅವರ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್​ ಹಾಗೂ ಮಿರ್ಜಾ ಇಸ್ಮಾಯಿಲ್​ ಇಬ್ಬರೂ ಬೆಂಗಳೂರಿನ ರಾಯಲ್​ ಸ್ಕೂಲ್​ನಲ್ಲಿ ಒಟ್ಟಿಗೆ ಶಿಕ್ಷಣ ಪಡೆಯುತ್ತಾರೆ. ಬಾಲ್ಯ ಸ್ನೇಹಿತರಾಗಿ ಬೆಳೆಯುತ್ತಾರೆ.. ಅತ್ಯಂತ ಶಿಸ್ತಿನ ವಿದ್ಯಾರ್ಥಿಯಾಗಿದ್ದ ಮಿರ್ಜಾ ಇಸ್ಮಾಯಿಲ್​ ಅವರು 1905ರಲ್ಲಿ ಪದವಿ ಮುಗಿಸಿ ಪೊಲೀಸ್​ ಅಧೀಕ್ಷಕರಾಗಿ ಕೋಲಾರದಲ್ಲಿ ವೃತ್ತಿ ಜೀವನವನ್ನ ಆರಂಭಿಸುತ್ತಾರೆ.

ಇಂಟರೆಸ್ಟಿಂಗ್​ ಏನಂದ್ರೆ, ಮಿರ್ಜಾ ಇಸ್ಮಾಯಿಲ್ ಅವರ ಬದುಕಿನಲ್ಲಿ ಸರ್​.ಎಂ.ವಿಶ್ವೇಶ್ವರಯ್ಯನವರ ಪ್ರಭಾವ ತುಂಬಾನೇ ಇತ್ತು.. ಸರ್​ಎಂವಿ ಮಾರ್ಗದರ್ಶನದಲ್ಲಿ ಬೆಳೆದಂತಾ ಮಿರ್ಜಾ ಇಸ್ಮಾಯಿಲ್​ ಅವರಿಗಾಗಿಯೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಹುಜುರ್​ ಸೆಕ್ರೆಟರಿ ಹುದ್ದೆಯನ್ನ ಸೃಷ್ಟಿ ಮಾಡ್ತಾರೆ.. ಹೀಗೆ ಮಹಾರಾಜರ ಆಪ್ತಕಾರ್ಯದರ್ಶಿಯಾದ ಮಿರ್ಜಾ ಇಸ್ಮಾಯಿಲ್​ ಅವರು ಬಳಿಕ ಅಂದ್ರೆ, 1926ರಲ್ಲಿ ಮೈಸೂರು ಸಂಸ್ಥಾನದ ದೀವಾನರಾಗುತ್ತಾರೆ.. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಹಾಗೂ ದೀವಾನ್​ ಸರ್ ಮಿರ್ಜಾ ಇಸ್ಮಾಯಿಲ್​ ಅವರ ಅವಧಿಯನ್ನ ಮೈಸೂರು ಸಂಸ್ಥಾನದ ಸುವರ್ಣ ಯುಗ ಎಂದೇ ಇತಿಹಾಸಕಾರರು ಬಣ್ಣಿಸುತ್ತಾರೆ.. ಆ ಅವಧಿಯಲ್ಲಿ ಆದಂತಾ ಅಭಿವೃದ್ಧಿ ಕಾರ್ಯಗಳು ಇಡೀ ಭರತಖಂಡದಾದ್ಯಂತ ಚರ್ಚೆಗೆ ಬಂದಿದ್ದವು.. ಸ್ವತಃ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಮೈಸೂರು ಸಂಸ್ಥಾನವನ್ನ ರಾಮರಾಜ್ಯ ಎಂದು ಕರೆದರು.. ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರಿಗೆ ರಾಜರ್ಷಿ ಎನ್ನುವ ಬಿರುದು ನೀಡಿದರು. ಅಂತಹ ಜೋಡಿಯಾಗಿತ್ತು ಮಹಾರಾಜ ನಾಲ್ವಡಿಯವರು ಹಾಗೂ ಮಿರ್ಜಾ ಇಸ್ಮಾಯಿಲ್​ ಅವರದ್ದು.

1936ರ ದಸರಾ ಜಂಬೂ ಸವಾರಿಯ ವೇಳೆ ನಡೆದಿದ್ದೇನು..?

ಸರ್​ ಮಿರ್ಜಾ ಇಸ್ಮಾಯಿಲ್​ ಅವರು, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಆಪ್ತಮಿತ್ರರಾಗಿದ್ದರು.. ಬಾಲ್ಯದ ಗೆಳೆಯರಾಗಿದ್ದ ಕಾರಣ ಸಲುಗೆಯ ಜೊತೆಗೆ ಅತ್ಯಂತ ಗೌರವವೂ ಇತ್ತು.. ಹೀಗಿರುವಾಗಲೇ 1936ನೇ ವರ್ಷದ ದಸರಾ ಹಬ್ಬ ಎದುರಾಗುತ್ತೆ.. ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿತ್ತು.. ಜಂಬೂಸವಾರಿ ನೋಡಲು ಲಕ್ಷಾಂತರ ಜನ ಬಂದು ನೆರೆದಿದ್ದರು.. ಸಂಪ್ರದಾಯದ ಪ್ರಕಾರ, ಅರಮನೆಯ ಉತ್ತರ ದಿಕ್ಕಿನ ಕೋಟೆಯಿಂದ ಅಂಬಾರಿ ಹೊತ್ತ ಆನೆಯ ಮೆರವಣಿಗೆ ಆರಂಭವಾಗುತ್ತೆ.. ಆನೆ ಬರುತ್ತಿದ್ದಂತೆ ಜನರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಜಯಹೋ.. ಜಯಹೋ ಎನ್ನುವ ಉದ್ಘೋಷ ಮುಗಿಲು ಮುಟ್ಟುತ್ತದೆ..

ಉತ್ತರ ದಿಕ್ಕಿನ ಕೋಟೆಯಿಂದ ಬಂದಂತಾ ಅಂಬಾರಿ ಹೊತ್ತ ಆನೆ ಜಯಚಾಮರಾಜೇಂದ್ರ ಒಡೆಯರ್ ವೃತ್ತವನ್ನ ದಾಟುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆ ವೃತ್ತದಿಂದ ಸ್ವಲ್ಪ ಮುಂದಕ್ಕೆ ಬರುತ್ತಿದ್ದಂತೆ ಕಟ್ಟಡಗಳ ಮೇಲೆ ಕುಳಿತಿದ್ದ ಜನ, ಫುಟ್​ಪಾತ್​ಗಳಲ್ಲಿ ನೆರೆದಿದ್ದ ಜನ ಆಕ್ರೋಶಭರಿತರಾಗಿದ್ದರು.. ಜನರ ಕೂಗಾಟ ಶುರುವಾಗಿತ್ತು.. ಅಂಬಾರಿ ಹೊತ್ತ ಆನೆಯನ್ನೇ ಕೆಳಗೆ ಬೀಳಿಸಲು ಜನ ಮುಂದಾಗಿದ್ದರು.. ಅಂಬಾರಿಯಲ್ಲಿ ಮಹಾರಾಜರು ಕುಳಿತಿದ್ದಾರೆ ಎನ್ನುವ ಪರಿಜ್ಞಾನವೇ ಜನರಿಗೆ ಇರಲಿಲ್ಲ.. ಯಾಕಂದ್ರೆ, ಆ ಜನತೆಯ ಆಕ್ರೋಶ ಓರ್ವ ವ್ಯಕ್ತಿಯ ಮೇಲಿತ್ತು.. ಆ ವ್ಯಕ್ತಿ ಬೇರಾರೂ ಅಲ್ಲ… ಅರಸರ ಜೊತೆಯಲ್ಲಿ ಅಂಬಾರಿ ಮೇಲೆ ಕುಳಿತಿದ್ದ ವ್ಯಕ್ತಿ ಇವರೇ ದೀವಾನ್​ ಸರ್​ ಮಿರ್ಜಾ ಇಸ್ಮಾಯಿಲ್​..

Also read:  ಮೈಸೂರಿನಲ್ಲಿ ಮಳೆ ಅವಾಂತರ: ಮೂರು ಅಂಗಡಿಗಳು ನೆಲಸಮ
Also read:  ದೆಹಲಿ ವಾಯುಮಾಲಿನ್ಯದಿಂದ ನನ್ನ ಹೆಂಡತಿ ಒಂದು ತಿಂಗಳು ಮನೆಯಿಂದ ಹೊರ ಬಂದಿಲ್ಲ ಎಂದ ವಿಧಾನ ಸಭೆ ಸ್ಪೀಕರ್!

ಸ್ನೇಹದ ಗೌರವಾರ್ತ ಅಂಬಾರಿ ಮೇಲೆ ಕೂರಿಸಿದ ರಾಜರು..!

ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರು, ಆ ದಿನ ಅಂಬಾರಿಯ ಮೇಲೆ ತಮ್ಮ ಆಪ್ತಮಿತ್ರ ಹಾಗೂ ದೀವಾನ್​ ಸರ್​ ಮಿರ್ಜಾ ಇಸ್ಮಾಯಿಲ್​ ಅವರನ್ನ ಕೂರಿಸಿಕೊಂಡಿದ್ದರು.. ಅದನ್ನ ಕಂಡ ಜನ ಆಕ್ರೋಶಗೊಳ್ತಾರೆ. ಯಾಕಂದ್ರೆ, ಅಂಬಾರಿಯ ಮೇಲೆ ಮಹಾರಾಜರು ಹಾಗೂ ಅವರ ಪರಿವಾರವನ್ನ ಹೊರತುಪಡಿಸಿ ಬೇರೆ ಯಾರನ್ನೂ ಜನ ಸ್ವೀಕರಿಸುತ್ತಿರಲಿಲ್ಲ.. ಹೀಗಾಗಿಯೇ ಜನ ಆಕ್ರೋಶಗೊಂಡಿದ್ದರು.. ಅಂಬಾರಿಯನ್ನೇ ಕೆಳಗೆ ಬೀಳಿಸಲು ಮುಂದಾಗಿದ್ದರು. ಭದ್ರತಾಪಡೆ ಎಷ್ಟೇ ಪ್ರಯತ್ನಪಟ್ಟರೂ ಜನ ಸಮಾಧಾನಗೊಳ್ಳುವುದಿಲ್ಲ

ಸರ್​ ಮಿರ್ಜಾ ಇಸ್ಮಾಯಿಲ್​ 

ಸರ್​ ಮಿರ್ಜಾ ಇಸ್ಮಾಯಿಲ್​ ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ. ಅದನ್ನ ಕನ್ನಡಿಗರು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. ಅವರ ಆಲೋಚನೆಗಳೇ ಹಾಗಿದ್ದವು.. ನಿಮಗೆ ಗೊತ್ತಿದೆಯೋ ಇಲ್ವೋ, ಭಾರತ ಪಾಕಿಸ್ತಾನ ಭಾಗವಾದಾಗ, ಪಾಕಿಸ್ತಾನದ ಪ್ರಧಾನಿ ಮೊಹಮ್ಮದ್​ ಅಲಿ ಜಿನ್ನಾ  ಅವರು ಸರ್​ ಮಿರ್ಜಾ ಇಸ್ಮಾಯಿಲ್​ ಅವರಿಗೆ ಆಹ್ವಾನ ನೀಡಿದ್ದರು.. ಭಾರತ ಸರ್ಕಾರ ಕೂಡ ಮಿರ್ಜಾ ಇಸ್ಮಾಯಿಲ್​ ಅವರಿಗೆ ಕಾಶ್ಮೀರದ ಮುಖ್ಯಮಂತ್ರಿ ಸ್ಥಾನವನ್ನ ನೀಡಲು ಮುಂದಾಗಿತ್ತು.. ಅಂತಹ ಮಿರ್ಜಾ ಇಸ್ಮಾಯಿಲ್​ ಅವರ ಬಗ್ಗೆ ನಾಲ್ವಡಿಯವರಿಗೆ ವಿಶೇಷವಾದ ಸ್ನೇಹವಿತ್ತು.. ಅದಕ್ಕಾಗಿಯೇ ಅವರು ಅಂಬಾರಿ ಮೇಲೆ ಅವರನ್ನ ಕೂರಿಸಿಕೊಂಡಿದ್ದರು.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಹಾಗೂ ದೀವಾನ್​ ಸರ್​ ಮಿರ್ಜಾ ಇಸ್ಮಾಯಿಲ್​ ಅವರನ್ನು ಹೊತ್ತ ಆನೆ ಮೆರವಣಿಗೆ ಬರುತ್ತಿದ್ದಂತೆ ಜನತೆ ಆಕ್ರೋಶದಿಂದ ಕೂಗಾಡುತ್ತಾರೆ.. ಆನೆಗೆ ಕಟ್ಟಲಾಗಿದ್ದ ಹಗ್ಗವನ್ನ ಕತ್ತರಿಸಿ ಅಂಬಾರಿಯನ್ನ ಕೆಳಗೆ ಬೀಳಿಸಲು ಪ್ರಯತ್ನಿಸುತ್ತಾರೆ.. ರಾಜರಲ್ಲದೇ ಬೇರೆ ಯಾರೇ ಅಂಬಾರಿಯ ಮೇಲೆ ಕುಳಿತರೂ, ಮೈಸೂರಿನ ಪ್ರಜೆಗಳು ಕ್ಷಣ ಕಾಲವೂ ಸಹಿಸುತ್ತಿರಲಿಲ್ಲ ಎನ್ನುವುದಕ್ಕೆ ಆ ಘಟನೆ ಸಾಕ್ಷಿಯಾಗಿತ್ತು.

ಜನ ಮೈಸೂರು ಮಹಾರಾಜರಿಗೆ ಕೊಟ್ಟಂತಾ ಸ್ಥಾನ ಎಂಥಾದ್ದು ಎನ್ನುವುದು ಜಗತ್ತಿಗೆ ಅರ್ಥವಾಗುತ್ತೆ. ಅಂಬಾರಿ ಮೇಲೆ ರಾಜರನ್ನಲ್ಲರೇ ಬೇರೆ ಯಾರನ್ನೂ ಪ್ರಜೆಗಳು ಸ್ವೀಕರಿಸುವುದಿಲ್ಲ ಎನ್ನುವ ಸಂಗತಿ ಆ ದಿನ ಪ್ರತಿಯೊಬ್ಬರಿಗೂ ತಿಳಿಯುತ್ತೆ. ಜನರ ಆಕ್ರೋಶವನ್ನ ಕಂಡಂತಾ ಮಹಾರಾಜರು ಆನೆಯನ್ನ ಬೇಗನೇ ಹೋಗುವಂತೆ ಸೂಚಿಸುತ್ತಾರೆ.. ಸಂಪ್ರದಾಯದ ಪ್ರಕಾರ, ಅರಮನೆಯಿಂದ ಹೊರಟ ಮಹಾರಾಜರಿಗೆ ಕೆಲ ಗಣ್ಯರು ಹಾಗೂ ಗಣ್ಯ ಸಂಸ್ಥೆಗಳು ಪುಷ್ಪವನ್ನ ಅರ್ಪಿಸುವ ಮೂಲಕ ಗೌರವ ಸಲ್ಲಿಸಲು ಅವಕಾಶ ನೀಡಲಾಗುತ್ತೆ.. ಅದಕ್ಕೆಂದೇ ಗಣ್ಯರು ಚಪ್ಪರ ಹಾಕಿಕೊಂಡು ಕಾಯುತ್ತಿರುತ್ತಾರೆ.. ಆದ್ರೆ, ಆವತ್ತು ಮಹಾರಾಜರು ಆನೆಯನ್ನ ಎಲ್ಲೂ ನಿಲ್ಲೋದಕ್ಕೆ ಬಿಡೋದಿಲ್ಲ.. ಕೆಲವೇ ನಿಮಿಷಗಳಲ್ಲಿ ಅಂಬಾರಿ ಹೊತ್ತ ಆನೆ ಬನ್ನಿ ಮಂಟಪವನ್ನ ತಲುಪುತ್ತದೆ..

ಬನ್ನಿ ಮಂಟಪದಲ್ಲಿ ದೀವಾನ್​ ಸರ್​ ಮಿರ್ಜಾ ಇಸ್ಮಾಯಿಲ್​ ಅವರನ್ನ ಇಳಿಸಿದ ಮಹಾರಾಜರು, ವಾಪಸ್​ ಬರುವಾಗ ತಮ್ಮ ಭಾವನವರನ್ನ ಕೂರಿಸಿಕೊಂಡು ಬರುತ್ತಾರೆ.. ಅಷ್ಟೊತ್ತಿಗೆ ಮೈಸೂರಿನ ಜನ ಶಾಂತರಾಗಿದ್ದರು.. ಆ ಘಟನೆಯೇ ಕೊನೆ.. ಮತ್ತೆಂದೂ ಮಹಾರಾಜರು ತಮ್ಮ ಪರಿವಾರವನ್ನಲ್ಲದೇ ಬೇರೆ ಯಾರನ್ನೂ ಅಂಬಾರಿ ಮೇಲೆ ಹತ್ತಿಸುವ ಧೈರ್ಯ ತೋರುವುದಿಲ್ಲ.. ಅಂದ ಹಾಗೆ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರಿಗೆ ದೀವಾನ್​ ಮಿರ್ಜಾ ಇಸ್ಮಾಯಿಲ್​ ಅವರ ಮೇಲೆ ಅಷ್ಟೊಂದು ಅಭಿಮಾನ ಹಾಗೂ ಪ್ರೀತಿ ಇರಲು ಸಾಕಷ್ಟು ಕಾರಣಗಳಿದ್ದವು.. ಸರ್​ ಮಿರ್ಜಾ ಇಸ್ಮಾಯಿಲ್​ ಸಾಮಾನ್ಯ ವ್ಯಕ್ತಿಯೇನು ಆಗಿರಲಿಲ್ಲ.. ಅವರು ನಾಡಿಗೆ ನೀಡಿದ  ಕೊಡುಗೆಗಳು ಒಂದೆರಡಲ್ಲ.

Also read:  ಮುಸ್ಲಿಂ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಿಸಲು ಮಹಾರಾಷ್ಟ್ರದಲ್ಲಿ ಸಲ್ಮಾನ್​ ಖಾನ್​ ವ್ಯಾಕ್ಸಿನ್​ ಜಾಗೃತಿ ಅಭಿಯಾನ.
Also read:  ಪ್ರಥಮ್​ ಕೊರೊನಾ ವಿರುದ್ಧದ ಹೋರಾಟಕ್ಕೆ ಆನೆಬಲ..!

ಕೈಗಾರಿಕೆ.. ನೀರಾವರಿ.. ಉದ್ಯಾನಗಳ ನಿರ್ಮಾಣ..!

15 ವರ್ಷಗಳ ಕಾಲ ದೀವಾನರಾಗಿದ್ದ ಸರ್​ ಮಿರ್ಜಾ ಇಸ್ಮಾಯಿಲ್​ ಅವರು ನೀರಾವರಿ, ಕೈಗಾರಿಕೆ, ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ.. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಒಂದಲ್ಲ ಎರಡಲ್ಲ, 30 ಸಾವಿರಕ್ಕೂ ಹೆಚ್ಚು ಕೆರೆಗಳು ನಿರ್ಮಾಣವಾಗುತ್ತವೆ.. ಬೆಂಗಳೂರಿನಲ್ಲಿ ಹೆಚ್​ಎಎಲ್​, ಪಿಂಗಾಣಿ ಕಾರ್ಖಾನೆ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ, ಭದ್ರಾವತಿಯಲ್ಲಿ ಸಿಮೆಂಟ್​ ಹಾಗೂ ಕಾಗದ ಕಾರ್ಖಾನೆ ಸೇರಿದಂತೆ ನಾಡಿನಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಆರಂಭವಾಗುತ್ತವೆ.. ನಿಮಗೆ ಗೊತ್ತಿದೆಯೋ ಇಲ್ವೋ, ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿ ಹಾಗೂ ಹೇಸರಘಟ್ಟದಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗಿದ್ದು ಕೂಡ ಇದೇ ಮಿರ್ಜಾ ಇಸ್ಮಾಯಿಲ್​ ಅವರಿಂದಲೇ..

ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೆಡಿಕಲ್​ ಕಾಲೇಜುಗಳು, ಬೆಂಗಳೂರಿಗೆ ಡಬಲ್​ ಡೆಕ್ಕರ್​ ಬಸ್​ಗಳು, ಟೌನ್​ ಹಾಲ್​ ಕಟ್ಟಡದ ಡಿಸೈನ್​, ಮೈಸೂರು ಸಂಸ್ಥಾನದಲ್ಲಿ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್​, ನೂರಾರು ಶಾಲೆಗಳು, ಕಾಲೇಜುಗಳು, ಉದ್ಯಾನವನಗಳು, ಆಟದ ಮೈದಾನಗಳು, ಅಗಲವಾದ ರಸ್ತೆಗಳು, ರಸ್ತೆಗಳ ಎರಡೂ ಬದಿಯಲ್ಲಿ ಫುಟ್​ಪಾತ್​, ರಾಸಾಯನಿಕ ಗೊಬ್ಬರ ಕಾರ್ಖಾನೆಗಳು, ವಿದ್ಯುತ್​ ಬಲ್ಬ್​ಗಳ ಉದ್ಯಮ, ದಿ ಮೈಸೂರು ಕಾಫಿ ಕ್ಯೂರಿಂಗ್​ ವರ್ಕ್ಸ್​, ಕನ್ನಂಬಾಡಿ ಕಟ್ಟೆ ಅಣೆಕಟ್ಟೆಯ ಮುಂದೆ ಬೃಂದಾವನ ನಿರ್ಮಾಣ, ಬೆಂಗಳೂರಿನ ಕಲಾಸಿಪಾಳ್ಯದಲ್ಲಿ 1 ಲಕ್ಷ 30 ಸಾವಿರ ರೂಪಾಯಿ ವೆಚ್ಚದಲ್ಲಿ ಬಸ್​ ನಿಲ್ದಾಣ ಹೀಗೆ ಸರ್​ ಮಿರ್ಜಾ ಇಸ್ಮಾಯಿಲ್ ಅವರು ನಾಡಿಗೆ ಕೊಟ್ಟಂತಾ ಕೊಡುಗೆಯನ್ನ ಲೆಕ್ಕ ಹಾಕಲು ಸಾಧ್ಯವೇ ಇಲ್ಲ.

ಮರೆಯವಂತೆಯೇ ಇಲ್ಲ ಸರ್​ ಮಿರ್ಜಾ ಅವರ ಕೊಡುಗೆ..!

ನಿಮಗೆ ನೆನಪಿರಲಿ, ಸರ್​ ಮಿರ್ಜಾ ಇಸ್ಮಾಯಿಲ್​ ಅವರ ಮಾತೃ ಭಾಷೆ ಉರ್ದು ಆದರೂ ಅವರಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ವಿಪರೀತ ಪ್ರೇಮವಿತ್ತು.. ಹೀಗಾಗಿಯೇ ಅವರು ಕನ್ನಡ ಮತ್ತು ಸಂಸ್ಕೃತವನ್ನ ಪೋಷಿಸುತ್ತಾ ಬಂದರು.. ಸರ್​ ಮಿರ್ಜಾ ಇಸ್ಮಾಯಿಲ್​ ಅವರು ಧರ್ಮದ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನ ಕೂಡ ಎದುರಿಸುತ್ತಾರೆ.. ಆದ್ರೆ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗೆಳೆತನದ ಗೌರವದಿಂದ ಅದೆಲ್ಲವನ್ನೂ ಮರೆಯುತ್ತಾರೆ.. ಇದೇ ಕಾರಣಕ್ಕೆ 1940ರಲ್ಲಿ ನಾಲ್ವಡಿಯವರು ನಿಧನ ಹೊಂದಿದ ಕೆಲವೇ ದಿನಕ್ಕೆ ಅವರು ದೀವಾನ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ.. ಕೆಲ ಕಾಲ ಜೈಪುರ ಹಾಗೂ ಹೈದ್ರಾಬಾದ್​ ನಿಜಾಮರ ಜೊತೆಯಲ್ಲಿ ಕೆಲಸ ಮಾಡುತ್ತಾರೆ.. ಕೊನೆಗೆ ತಮ್ಮ ಕೊನೆಯ ದಿನಗಳನ್ನ ಕನ್ನಡ ನಾಡಿನಲ್ಲೇ ಕಳೆಯಬೇಕು ಎನ್ನುವ ಮಹದಾಸೆಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸುತ್ತಾರೆ..

ಸರ್ ಮಿರ್ಜಾ ಇಸ್ಮಾಯಿಲ್ ಅವರು ಕರುನಾಡಿನ ಕೀರ್ತಿ.. ಅವರು ಮಹಾರಾಜರ ಸ್ನೇಹಿತರಷ್ಟೇ ಅಗಿರಲಿಲ್ಲ.. ಅವರು ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರರಾಗಿದ್ದರು.. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರ ಜೊತೆಯಲ್ಲಿ ಸೇರಿ ಅವರು ಮಾಡಿದಂತಾ ಕಾರ್ಯಗಳು ಇಂದಿಗೂ ಜೀವಂತವಾಗಿವೆ.. ಆ ಮೂಲಕ ಸರ್​ ಮಿರ್ಜಾ ಇಸ್ಮಾಯಿಲ್ ಅವರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ.

 

 

 

 

Latest article