Tuesday, August 16, 2022

ಹೊಟ್ಟೆಪಾಡಿಗಾಗಿ ಪ್ರತಿನಿತ್ಯ 20 ರಿಂದ 22 ಕಿಮೀ ಸೈಕಲ್​ ತುಳಿಯುವ 81ರ ವೃದ್ಧೆ

Must read

ಜಬಲ್​ಪುರ: ಮಧ್ಯಪ್ರದೇಶದ ಜಬಲ್​ಪುರದ 81 ವರ್ಷದ ವೃದ್ಧೆಯೊಬ್ಬರು ಪ್ರತಿನಿತ್ಯ 20 ರಿಂದ 22 ಕಿಲೋಮೀಟರ್ ಸೈಕಲ್ ಓಡಿಸಿಕೊಂಡು ಹೋಗಿ ಮನೆಗೆಲಸ ಮಾಡಿ ತನ್ನ ಬದುಕು ಕಟ್ಟಿಕೊಂಡಿದ್ದಾಳೆ.

ಈ ವೃದ್ಧೆ ಹೆಸರು ಶಾಂತಿಬಾಯಿ.ಈಕೆ ಪ್ರತಿನಿತ್ಯ 20 ರಿಂದ 22 ಕಿಲೋಮೀಟರ್ ಸೈಕಲ್ ಓಡಿಸಿಕೊಂಡು ಹೋಗಿ ಮನೆಗೆಲಸ ಮಾಡುತ್ತಿದ್ದಾರೆ. ಶಾಂತಿಬಾಯಿಗೆ ಇಬ್ಬರು ಮಕ್ಕಳಿದ್ದು, ಅವರಿಬ್ಬರನ್ನು ಕಷ್ಟಪಟ್ಟು ದುಡಿದು ಮದುವೆ ಮಾಡಿಕೊಟ್ಟಿದ್ದಾರೆ. ಈಕೆ ವಾಸಿಸುವ ಸ್ಥಳ ಕುಗ್ರಾಮವಾಗಿದ್ದು, ಅಲ್ಲಿ ಯಾವುದೇ ಕೆಲಸ ಸಿಗೋದಿಲ್ಲ.

ಹೀಗಾಗಿ, ಸುಮಾರು 22 ಕಿಲೋಮೀಟರ್ ದೂರಕ್ಕೆ ಹೋಗಿ ಅಲ್ಲಿರುವ ಶ್ರೀಮಂತರ ಮತ್ತು ಮಧ್ಯಮ ವರ್ಗದ ಮನೆಯಲ್ಲಿ ದುಡಿಮೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

 

Latest article