Thursday, January 27, 2022

ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಸಹೋದರರು ರೈಲಿಗೆ ಸಿಲುಕಿ ಸಾವು

Must read

ರೈಲ್ವೆ ಹಳಿಯ ಮೇಲೆ ಕುಳಿತು ಪಬ್​ಜಿ ಆಡುವುದರಲ್ಲಿ ಮಗ್ನರಾಗಿದ್ದ ಇಬ್ಬರು ಸಹೋದರರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಲೋಕೇಶ್ ಮೀನಾ (22) ಮತ್ತು ಆತನ ಕಿರಿಯ ಸಹೋದರ ರಾಹುಲ್ (19) ಎಂದು ಗುರುತಿಸಲಾಗಿದೆ. ಲೋಕೇಶ್ ಮೀನಾ ಮತ್ತು ರಾಹುಲ್ ರೂಪಬಾಸ್ ಪಟ್ಟಣದ ಬಳಿ ರೈಲ್ವೆ ಹಳಿಯಲ್ಲಿ ಕುಳಿತು ಪಬ್​ಜಿ ಆಡುತ್ತಿದ್ದಾಗ ರೈಲಿಗೆ ಸಿಲುಕಿದ್ದಾರೆ.

ಆಟದಲ್ಲಿ ಮುಳುಗಿದ್ದ ಕಾರಣ, ರೈಲು ಬರುವುದನ್ನು ಗಮನಿಸಿಲ್ಲ. ಇವರಿಬ್ಬರು ತಮ್ಮ ಅಕ್ಕನೊಂದಿಗೆ ರೂಪಬಾಸ್‌ನಲ್ಲಿ ವಾಸಿಸುತ್ತಿದ್ದರು. ತಂದೆ ಅಲ್ವಾರ್‌ನ ತೆಹ್ಲಾ ಬಳಿಯ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

Latest article