Thursday, January 20, 2022

ನಾಗಚೈತನ್ಯ ಹುಟ್ಟು ಹಬ್ಬದ ದಿನ ಸಾಕು ನಾಯಿಗೆ ವಿಶ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಸಮಂತಾ: ಇದೆಂತಾ ಅವಮಾನ!

Must read

ನಟಿ ಸಮಂತಾ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನೆಗಿಟಿವ್​ ಸುದ್ದಿಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇದೀಗ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದು, ಅವರ ಪ್ರತಿಯೊಂದು ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಮಾಮೂಲಿಯಂತೆ ಸಕ್ರಿಯರಾಗಿದ್ದಾರೆ. ಪ್ರತಿದಿನ ಏನಾದರೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಸುದ್ದಿಯೇನೆಂದರೆ ಸಮಂತಾ ಅವರ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸಮಂತಾ ಅವರ ಸಾಕು ನಾಯಿಗಳ ಬಗ್ಗೆ ಪ್ರೀತಿ ಜಾಸ್ತಿ ಸಾಮಾನ್ಯವಾಗಿ ಅವರು ನಾಯಿಗಳ ಬಗ್ಗೆ ಪೋಸ್ಟ್ ಮಾಡುತ್ತಾರೆ ಅದೇ ದಿನ ಅಂದ್ರೆ ನ. 23ರಂದು ನಾಗಚೈತನ್ಯ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಇಡೀ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. ಆದರೆ, ಸಮಂತಾ, ಮಾಜಿ ಪತಿಯ ಬಗ್ಗೆ ಒಂದು ಮಾತನ್ನು ಆಡಿಲ್ಲ. ಇಷ್ಟೇ ಇದ್ದರೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿರಲಿಲ್ಲ. ಆದರೆ, ಸಮಂತಾ ತಮ್ಮ ಸಾಕುನಾಯಿಗೆ ಬರ್ತಡೇ ಶುಭಕೋರಿದ್ದಾರೆ. ಇದೇ ವಿಚಾರ ಅಭಿಮಾನಿಗಳ ಮನದಲ್ಲಿ ನೋವುಂಟು ಮಾಡಿದೆ.

Latest article