Tuesday, August 16, 2022

ಶಮಿತಾ ಶೆಟ್ಟಿ ಮೇಲೆ ಸಲ್ಮಾನ್​ ಖಾನ್​ ಗರಂ: ಕಾರಣ ಏನು ಗೊತ್ತಾ?

Must read

ಹಿಂದಿ ಬಿಗ್​ ಬಾಸ್​ ರಿಯಾಲಿಟೀ ಶೋನಲ್ಲಿ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ಸ್ಪರ್ಧಿಗಳ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಉದಾಹರಣೆ  ಸಾಕಷ್ಟಿದೆ. ಆದರೀಗ ಅವರು ಶಮಿತಾ ಶೆಟ್ಟಿ ಮೇಲೆ ಗರಂ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ನಲ್ಲಿ ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ. ಇನ್ನೇನು ಶೀಘ್ರದಲ್ಲೇ ಗ್ರಾಂಡ್​ ಫಿನಾಲೆ ಬರುತ್ತಿದೆ. ಎಂದಿನಂತೆ ಸಲ್ಮಾನ್​ ಖಾನ್​ ಅತ್ಯಾಕರ್ಷಕವಾಗಿ ನಿರೂಪಣೆ ಮಾಡುತ್ತಿದ್ದಾರೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ‘ಹಿಂದಿ ಬಿಗ್​ ಬಾಸ್​ ಸೀಸನ್​ 15’ರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆ ಪೈಕಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅನೇಕ ಕಾರಣಗಳಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಸ್ಟಾರ್​ ಕಲಾವಿದೆ ಶಿಲ್ಪಾ ಶೆಟ್ಟಿಯ ಸಹೋದರಿ ಎಂಬ ಕಾರಣಕ್ಕೆ ಶಮಿತಾ ಮೇಲೆ ಪ್ರೇಕ್ಷಕರ ಗಮನ ಕೇಂದ್ರೀಕೃತವಾಗಿದೆ. ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಸ್ಪರ್ಧಿಸಿ ನಂತರ ‘ಬಿಗ್​ ಬಾಸ್​ 15’ಕ್ಕೆ ಎಂಟ್ರಿ ನೀಡುವ ಅವಕಾಶ ಪಡೆದ ಅವರು ಈಗ ಸಲ್ಮಾನ್​ ಖಾನ್​ ಜೊತೆಗೆ ಕಿರಿಕ್​ ಮಾಡಿಕೊಂಡಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ವಾರಾಂತ್ಯದ ಎಪಿಸೋಡ್​ನಲ್ಲಿ ಸಲ್ಮಾನ್​ ಖಾನ್​ ಅವರು ಎಲ್ಲ ಸ್ಪರ್ಧಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಹಲವು ವರ್ಷಗಳಿಂದಲೂ ಸಲ್ಮಾನ್​ ಖಾನ್​ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಅವರು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಅವರು ಸ್ಪರ್ಧಿಗಳ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಉದಾಹರಣೆಯೂ ಇದೆ. ಆದರೆ ಅವರು ಶಮಿತಾ ಶೆಟ್ಟಿ ಮೇಲೆ ಈ ರೀತಿ ಗರಂ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಎಷ್ಟರಮಟ್ಟಿಗೆ ಅಂದರೆ, ವಾಗ್ವಾದ ಮಾಡುವ ಭರದಲ್ಲಿ ಅವರು ಅಶ್ಲೀಲ ಪದವನ್ನೂ ಬಳಸಿ ಈಗ ಪೇಚಿಗೆ ಸಿಲುಕಿದ್ದಾರೆ.

ಈ ವಾರ ಸ್ಪರ್ಧಿಗಳಿಗೆ ಮುಖ್ಯವಾದ  ಟಾಸ್ಕ್​ ಒಂದು ನೀಡಲಾಗಿತ್ತು. ಆದರೆ ಅದನ್ನು ಬಿಗ್​ ಬಾಸ್​ ಮನೆಯ ಸದಸ್ಯರು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ. ಅದರಿಂದ ಸಲ್ಮಾನ್​ ಖಾನ್​ಗೆ ಕೋಪ ಬಂದಿದೆ. ಈ ಕುರಿತು ಮಾತನಾಡುವಾಗ ಶಮಿತಾ ಶೆಟ್ಟಿ ಅವರು ತಮ್ಮ ಧ್ವನಿ ಏರಿಸಿ ಮಾತನಾಡಿದರು. ‘ನೀವು ನನ್ನ ಶ್ರಮವನ್ನು ಪ್ರಶ್ನೆ ಮಾಡುತ್ತಿದ್ದೀರಿ.. ನಾನೆಷ್ಟು ಕಷ್ಟಪಟ್ಟಿದ್ದೇನೆ ಅಂತ ನೀವು ನೋಡಬಹುದು’ ಎಂದು ಸಲ್ಲು ಜೊತೆ ಶಮಿತಾ ಶೆಟ್ಟಿ ಜಗಳ ಶುರು ಮಾಡಿದ್ದರು..ಈ ವೇಳೆ ಶಮಿತಾ ಅಶ್ಲೀಲ ಪದ ಬಳಕೆ ಮಾಡಿದ್ದು ಸಲ್ಮಾನ್​ ಕೋಪಕ್ಕೆ ಕಾರಣವಾಗಿತ್ತು.

Also read:  ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸಿಧು ಹೊಗಳಿದ ದೆಹಲಿ ಸಿಎಂ ಕೇಜ್ರಿವಾಲ್​..!

Latest article