Monday, November 29, 2021

ಇನ್ನು ಮುಂದೆ ರಾಜಸ್ಥಾನ ರಸ್ತೆಗಳು ಕತ್ರಿನಾ ಮತ್ತು ಹೇಮಾ ಮಾಲಿನಿ ಕೆನ್ನೆಯಂತೆ ಇರಲಿವೆ ಎಂದ ಸಚಿವ

Must read

ಜೈಪುರ: ನೋಡ್ತಾ ಇರಿ. ಕತ್ರಿನಾ ಕೆನ್ನೆ ತರ ರಸ್ತೆಗಳು ರೆಡಿಯಾಗುತ್ವೆ ‌.. ನಮ್ಮ ತಾಲೂಕಿನ ರಸ್ತೆಗಳನ್ನು ಹೇಗೆ ಮಾಡಿಸುತ್ತೇವೆ ಅಂತ. ಸದ್ಯದಲ್ಲೇ ಅವು ಬಾಲಿವುಡ್‌ ನಟಿ ಕತ್ರಿನಾ ಕೈಫ್ರ ಕೆನ್ನೆಯಂತೆ ನಯವಾಗಿರಲಿವೆ. ಹೀಗೆಂದು ರಾಜಸ್ಥಾನದ ನೂತನ ಸಚಿವ, ಗುಧಾ ಕ್ಷೇತ್ರದ ಶಾಸಕ ಸಚಿವ ರಾಜೇಂದ್ರ ಗುಧಾ, ತಮ್ಮ ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದಾರೆ!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರ ಸಂಪುಟ ಪುನಾರಚನೆ ವೇಳೆ, ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ರಸ್ತೆಗಳ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ಪ್ರಸ್ತಾವಿಸಿದಾಗ ಅವರು ಹೀಗೆ ಉತ್ತರಿಸಿದರು. ಅದಕ್ಕೆ ಬೆಂಬಲಿಗರಿಂದ ಚಪ್ಪಾಳೆಯ ಸ್ವಾಗತವೂ ಸಿಕ್ಕಿದೆ.ಕೆಲ ವರ್ಷಗಳ ಹಿಂದೆ ರಾಜಕೀಯ ನಾಯಕರು ಬಾಲಿವುಡ್‌ ನಟಿ, ಸಂಸದೆ ಹೇಮಮಾಲಿನಿ ಕೆನ್ನೆಯಂತೆಯೇ ರಸ್ತೆ ನಿರ್ಮಿಸುವ ವಾಗ್ಧಾನ ನೀಡಿದ್ದರು

Latest article