ಮಂಡ್ಯ: ವಿವಾದಾತ್ಮಕ ಹೇಳಿಕೆ ನೀಡಿ ಜೈಲು ಸೇರಿದ್ದ ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿಗಳಗೆ ಜಾಮೀನು ಮಂಜೂರಾಗಿದೆ.
ಶ್ರೀರಂಗಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ನಿನ್ನೆ ರಾತ್ರಿ ರಿಷಿ ಕುಮಾರ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರ ಬಂದ ಕಾಳಿ ಮಠದ ಸ್ವಾಮೀಜಿಗಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದು, ಹಾರ ಹಾಕಿ, ಕಾಳಿ ಸ್ವಾಮಿ ಪರ ಘೋಷಣೆ ಕೂಗಿದ್ದಾರೆ.
ಈ ವೇಳೆ ಜೈಲು ಸಿಬ್ಬಂದಿ ಜೈಲಿನ ಬಳಿ ಘೋಷಣೆ ಕೂಗದಂತೆ ತಡೆದಿದ್ದು, ಪೊಲೀಸರ ವಿರುದ್ಧ ಹಿಂದೂ ಪರ ಕಾರ್ಯಕರ್ತರು ಆಕ್ರೋಶ ಹೊರ ಹಾಕಿ ಹೈಡ್ರಾಮ ನಡೆಸಿದ್ದಾರೆ ಎನ್ನಲಾಗಿದೆ.