Thursday, January 27, 2022

ರೈತರ 2 ಲಕ್ಷ ವರೆಗಿನ ಸಾಲ ಮನ್ನಾ: ಪಂಜಾಬ್​ ಸಿಎಂ ಮಹತ್ವದ ಘೋಷಣೆ..!

Must read

ಪಂಜಾಬ್​ನಲ್ಲಿ 2022ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ಅವರು ರೈತರಿಗೆ ಖುಷಿ ಸುದ್ದಿ ನೀಡಿದ್ದಾರೆ. ರಾಜ್ಯದ ರೈತರಿಗೆ 2 ಲಕ್ಷ ರೂ.ಗಳವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ರೈತರ ವಿರುದ್ಧ ನೋಂದಾಯಿಸಲಾದ ಎಲ್ಲಾ ಎಐಆರ್ ರದ್ದುಗೊಳಿಸುವುದಾಗಿ ಮತ್ತು ಪ್ರಸ್ತುತ ಸಾಲ ಮನ್ನಾ ಯೋಜನೆಯಡಿ 2 ಲಕ್ಷ ರೂ.ಗಳವರೆಗಿನ ಸಾಲ ಮನ್ನಾಕ್ಕೆ ಅನುಮೋದನೆ ನೀಡಲು 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಚನ್ನಿ ಗುರುವಾರ ಘೋಷಿಸಿದರು. ಇದರಿಂದ ಐದು ಎಕರೆ ವರೆಗಿನ ಜಮೀನು ಹೊಂದಿರುವ ಸುಮಾರು 1.09 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ 5.63 ಲಕ್ಷ ರೈತರಿಗೆ 4,610 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ. ಈ ಗಳಲ್ಲಿ 1.34 ಲಕ್ಷ ಸಣ್ಣ ರೈತರಿಗೆ 980 ಕೋಟಿ ರೂ.ಗಳ ಪರಿಹಾರ ದೊರೆತಿದ್ದರೆ, 4.29 ಲಕ್ಷ ಅಂಚಿನ ರೈತರು 3,630 ಕೋಟಿ ರೂ.ಗಳ ಸಾಲ ಮನ್ನಾದಿಂದ ಪ್ರಯೋಜನ ಪಡೆದಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

 

 

Latest article