Monday, November 29, 2021

ಮುಗ್ಧ ಮಗುವನ್ನು ಲಾಕಪ್‌ನಲ್ಲಿ ಕಳೆಯುವಂತೆ ಮಾಡುವುದು ಸರಿಯೇ-ಪೂಜಾ ಬೇಡಿ

Must read

ಮುಂಬೈ: ಡ್ರಗ್ಸ್​​​​ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್​ ನಟ ಶಾರುಖ್​ ಖಾನ್ ಅವರ​ ಪುತ್ರ ಆರ್ಯನ್​ ಖಾನ್​ ಪರವಾಗಿ ನಟಿ ಪೂಜಾ ಬೇಡಿ ಬ್ಯಾಟ್​ ಬೀಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪೂಜಾ ಬೇಡಿ, “ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದಿದ್ದರೂ ಕೂಡ ಮುಗ್ಧ ಮಗುವನ್ನು ಲಾಕಪ್‌ನಲ್ಲಿ ದಿನಗಳನ್ನು ಕಳೆಯುವಂತೆ ಮಾಡುವುದು ಸರಿಯೇ? ಯಾವುದೇ ಕಾರಣವಿಲ್ಲದೆ ಜೈಲಿಗೆ ನೂಕುವುದು ಮಾನಸಿಕವಾಗಿ ಹಾನಿಕಾರಕವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಮಾಡುವ ಅಗತ್ಯವಿದೆ. ಇಂತಹ ವ್ಯವಸ್ಥೆಗಳು ಅಮಾಯಕರನ್ನು ಶಿಕ್ಷಿಸುವ ಮೂಲಕ ಅಪರಾಧಿಗಳನ್ನು ಸೃಷ್ಟಿಸುತ್ತವೆ” ಎಂದು ಹೇಳಿದ್ದಾರೆ.

ಈ ಹಿಂದೆ, ಫರಾ ಖಾನ್, ಸ್ವರಾ ಭಾಸ್ಕರ್, ಸಯಾನಿ ಗುಪ್ತಾ, ಸುಸೇನ್ ಖಾನ್, ಸುನಿಲ್​ ಶೆಟ್ಟಿ ಮತ್ತು ಹೃತಿಕ್ ರೋಷನ್ ಸೇರಿದಂತೆ ಇತರ ಬಾಲಿವುಡ್​ ಸೆಲೆಬ್ರಿಟಿಗಳು ಆರ್ಯನ್​ ಖಾನ್​ನನ್ನು ಬೆಂಬಲಿಸಿದ್ದರು.

Latest article