Monday, November 29, 2021

ದೇವರ ಮುಂದೆ ನಿಂತು ಮನಿಕೆ ಮಗೆ ಹಿತೆ ಹಾಡಿಗೆ ನೃತ್ಯ ಮಾಡಿದ ಅರ್ಚಕ?

Must read

ಶ್ರೀಲಂಕಾದ ಗಾಯಕಿ ಯೋಹನಿ ಹಾಡಿರುವ ಮನಿಕೆ ಮಗೆ ಹಿತೆ ಹಾಡು ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ. ಈ ಹಾಡಿಗೆ ರೀಲ್ಸ್​ ಮಾಡಿ ಅನೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಅದೇ ರೀತಿ ಯೂಟ್ಯೂಬ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದುರ್ಗಾ ದೇವಿಯ ಮುಂದೆ ಆರತಿ ಹಿಡಿದು ಅರ್ಚಕರು ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಇವರು ನೃತ್ಯ ಮಾಡುತ್ತಿರುವುದು ಮನಿಕೆ ಮಗೆ ಹಿತೆ ಹಾಡಿಗೆ ಎಂಬಂತೆ ಭಾಸವಾಗುತ್ತದೆ. ಅರ್ಚಕರು ಯಾವ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎಂಬ ಕುರಿತಾದ ಸ್ಪಷ್ಟ ಮಾಹಿತಿ ಇಲ್ಲ, ಆದರೆ ದೃಶ್ಯಕ್ಕೆ ಈ ಹಾಡನ್ನು ಸೇರಿಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಈ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

Latest article