ಭಾರತಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿದ್ದ ಪಾಕ್ ಬೋಟನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಬಂಧಿಸಿದೆ. ಭಾರತದ ಜಲಗಡಿ ಭಾಗಕ್ಕೆ ಬಂದು ತಪ್ಪಿಸಿಕೊಳ್ಳಲು ಮುಂದಾದಾಗ ಈ ಘಟನೆ ನಡೆದಿದೆ. ಐಸಿಜಿಎಸ್ ಅಂಕಿತ್ ಶಿಪ್ನಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಯಾಸೀನ್ ಹೆಸರಿನ ಪಾಕ್ ಮೂಲದ ಬೋಟ್ ಅಕ್ರಮವಾಗಿ ಭಾರತದ ಜಲಗಡಿಗೆ ಪ್ರವೇಶ ಮಾಡಿತ್ತು. ಆ ಸಂದರ್ಭದಲ್ಲಿ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.
ಇನ್ನು ಭಾರತದ ಏಳು ಮೈಲಿನ ವರೆಗೆ ಒಳಪ್ರವೇಶವನ್ನ ಮಾಡಿತ್ತು. ಆ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್, ಶಿಪ್ ಸಿಬ್ಬಂದಿ ಪಾಕ್ ಬೋಟ್ಗಳನ್ನು ಸುತ್ತುವರಿದು ತಕ್ಷಣಪರಿಶೀಲನೆ ಮಾಡಿ ಎರಡು ಟನ್ ಮೀನು ವಶಕ್ಕೆ ಪಡೆದಿದ್ದಾರೆ. ಸಾಮಾನ್ಯವಾಗಿ ಇಂತಹ ಬೋಟ್ಗಳನ್ನು ಮಾದಕ ವಸ್ತುಗಳನ್ನ ಸಾಗಾಟ ಮಾಡಲು ಬಳಸುತ್ತಾರೆ. ಇನ್ನು, ಮೀನುಗಳ ಹೊಟ್ಟೆ ಭಾಗದಲ್ಲಿ ಡ್ರಗ್ಸ್ ಗಳನ್ನ ಬಚ್ಚಿಟ್ಟು ಸಾಗಾಟ ಮಾಡಿರುವ ಅನೇಕ ಪ್ರಕರಣಗಳು ತನಿಖೆ ವೇಳೆ ತಿಳಿದು ಬಂದಿದೆ.