Tuesday, August 16, 2022

ಸ್ಪೇನ್‍ನಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

Must read

ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.

112 ವಯಸ್ಸಿನ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು. ಆದರೆ, ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ. ಗಾರ್ಸಿಯಾ 4.2 ಎತ್ತರವಿದ್ದಾರೆ.

ಇದೀಗ ಅವರನ್ನು ಅತಿ ಹೆಚ್ಚು ವರ್ಷ ಬದುಕಿರುವ ಹಿರಿಯ ವ್ಯಕ್ತಿ ಎಂದು ಹೇಳಲಾಗಿದೆ. ಗಾರ್ಸಿಯಾ 1933ರಲ್ಲಿ ಆಂಟೋನಿನಾ ಬ್ಯಾರಿಯೊ ಗುಟೈರೆಜ್ ಜೊತೆ ವಿವಾಹವಾಗಿದ್ದರು. ಇವರಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ, ಮಗ ಅನಾರೋಗ್ಯ ಕಾರಣ ತೀರಿಕೊಂಡರು. ಸದ್ಯ ಸ್ಯಾಟರ್ನಿನೋ ಅವರು ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ವಾಸವಾಗಿದ್ದು, ಇವರಿಗೆ 14 ಜನ ಮೊಮ್ಮಕ್ಕಳು ಮತ್ತು 22 ಜನ ಮರಿ ಮೊಮ್ಮಕ್ಕಳಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ತನ್ನ ಕುಟುಂಬವನ್ನು ಭೇಟಿಯಾಗದೆ ಬೇಸರಗೊಂಡಿದ್ದರು. ಆದರೆ, ಗಾರ್ಸಿಯಾ ಅವರ 112ನೇ ಜನ್ಮದಿನವನ್ನು ಕುಟುಂಬಸ್ಥರು ಎಲ್ಲಾ ಸೇರಿ ಅದ್ಧೂರಿಯಾಗಿ ಆಚರಿಸಿದ್ದಾರೆ.

Latest article