Tuesday, May 17, 2022

ಡ್ರಗ್ಸ್ ಪ್ರಕರಣದಲ್ಲಿ ಪಾರದರ್ಶಕ ತನಿಖೆ ಮಾಡುತ್ತೇವೆ:ಎನ್​ಸಿಬಿ

Must read

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ. ಅಧಿಕಾರಿಗಳು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.

ಈ ಕುರಿತು ಮಾತನಾಡಿದ ಎನ್‌ಸಿಬಿ ಡೆಪ್ಯುಟಿ ಡಿಜಿ ಜ್ಞಾನೇಶ್ವರ್ ಸಿಂಗ್​ ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ನಮ್ಮ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಸ್ಪಷ್ಟನೆ ನೀಡಿದರು.

ಎನ್​ಸಿಬಿ ವಿರುದ್ಧ ಮಾಡಲಾಗಿರುವ ಆರೋಪಗಳು ಆಧಾರ ರಹಿತವಾಗಿದ್ದು, ದುರುದ್ದೇಶದಿಂದ ಕೂಡಿದೆ. ನಮ್ಮ ಕಾರ್ಯವಿಧಾನವು ವೃತ್ತಿಪರವಾಗಿ, ಕಾನೂನುಬದ್ಧವಾಗಿದೆ. ಪಾರದರ್ಶಕ ಮತ್ತು ಪಕ್ಷಪಾತವಿಲ್ಲದೆ ನಡೆಸುತ್ತೇವೆಂದು ಎನ್‌ಸಿಬಿ ಡೆಪ್ಯುಟಿ ಡಿಜಿ ಜ್ಞಾನೇಶ್ವರ್ ಸಿಂಗ್ ತಿಳಿಸಿದ್ದರು.

ಅಕ್ಟೋಬರ್​ 2ರಂದು ರಾತ್ರಿ ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಕ್ರೂಸ್‌ ಶಿಪ್‌ನಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು.ಈ ವೇಳೆ ಖಚಿತ ಮಾಹಿತಿಗೆ ಮೇರೆಗೆ ಮುಂಬೈ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿ ನಟ ಶಾರೂಖ್​ ಖಾನ್​ ಪುತ್ರ ಆರ್ಯನ್ ಖಾನ್‌ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು.

Latest article