Tuesday, October 26, 2021

ನಮ್ಮ ಬಾಹುಬಲಿ: ಎಂಬಿಬಿಎಸ್ ಓದಿಲ್ಲ..ಆದರು ಜನರ ಪಾಲಿನ ಡಾಕ್ಟರ್ ಕೋಲಾರದ ರಾಜಶೇಖರ್

Must read

ಸರ್ಕಾರಿ ಕೆಲಸ ಅನ್ನೋದು ಬಹಳಷ್ಟು ಜನರ ಡ್ರೀಮ್​.. ಅದರಲ್ಲೂ ಉನ್ನತ ಅಧಿಕಾರಿಯಾಗೋಕೆ ಹಗಲು ರಾತ್ರಿ ಕಷ್ಟಪಡುತ್ತಾರೆ.. ಅದೇ ರೀತಿ ಕಷ್ಟಪಟ್ಟು ಓದಿ, ಆರ್​ಟಿಒ ಇಲಾಖೆಯಲ್ಲಿ ಜಾಯಿಂಟ್​ ಕಮೀಷನರ್​ ಆಗ್ತಾರೆ ಕೋಲಾರದ ರಾಜಶೇಖರ್​.. ಕೈತುಂಬಾ ಸಂಬಳ, ಸರ್ಕಾರಿ ಸವಲತ್ತು.. ನೆಮ್ಮದಿಯ ಬದುಕು.. ಆದ್ರೆ, ಅನಾರೋಗ್ಯ ಅನ್ನೋದು ಅವರನ್ನ ಇನ್ನಿಲ್ಲದಂತೆ ಬಾಧಿಸುತ್ತೆ.. ಅದರಿಂದ ಆಚೆ ಬರೋಕೆ ಸರ್ಕಾರಿ ಕೆಲಸವನ್ನೇ ತೊರೆಯುತ್ತಾರೆ.. ಆಹಾರ ಹಾಗೂ ತಮ್ಮ ಜೀವನಶೈಲಿಯಲ್ಲೇ ಆರೋಗ್ಯವನ್ನ ಕಂಡುಕೊಳ್ಳುತ್ತಾರೆ.. ಅಷ್ಟೇ ಅಲ್ಲ, 25 ವರ್ಷಗಳ ಕಾಲ ಅಧ್ಯಯನ ಕೈಗೊಳ್ಳುತ್ತಾರೆ.. ಸಕಲ ಖಾಯಿಲೆಗೂ ಆಹಾರದಲ್ಲೇ ಸಂಜೀವಿನಿ ಔಷಧವಿದೆ ಎನ್ನುವ ಸತ್ಯವನ್ನ ಅರಿಯುತ್ತಾರೆ.. ಬಳಿಕ ಅದನ್ನೇ ಜನರಿಗೂ ತಿಳಿಸುತ್ತಾರೆ.. ಆರೋಗ್ಯ ಸೇವೆಗೆಂದೇ ಜೀವ ಸಂಜೀವಿನಿ ಎನ್ನುವ ಸಂಸ್ಥೆಯನ್ನ ಆರಂಭಿಸಿ ಜನರ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಎದುರಾಗುವ ಎಲ್ಲಾ ರೀತಿಯ ಖಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದಾರೆ.. ಆ ಮೂಲಕ ಎಂಬಿಬಿಎಸ್​ ಓದದೇ ಜನರಿಂದ ಡಾಕ್ಟರ್​ ಎನಿಸಿಕೊಂಡಿದ್ದಾರೆ.. ಜನರಿಂದಲೇ ಡಾಕ್ಟರ್​ ಆಗಿರುವ ಕೋಲಾರದ ರಾಜಶೇಖರ್​ ಅವರೇ ಇಂದಿನ ನಮ್ಮ ಬಾಹುಬಲಿ..

More articles

Latest article