Friday, January 21, 2022

ನಮ್ಮ ಬಾಹುಬಲಿ: ಇವರು ಅನಾಥರ ಪಾಲಿನ ತಾಯಿ.. ಬಡವರ ಪಾಲಿನ ಮಮಕಾರಮಯಿ..

Must read

ಹೆಸರು ತನುಲಾ ತರುಣ್.. ಇವರು ಬಡವರ ಪಾಲಿನ ತಾಯಿ.. ಅನಾಥರ ಪಾಲಿನ ಕರುಣಾಮಯಿ… ಹೊಸಬೆಳಕು ಹೆಸರಿನ ಆಶ್ರಮವನ್ನ ಸ್ಥಾಪಿಸಿ, ಅದೆಷ್ಟೋ ಮಾನಸಿಕ ಅಸ್ವಸ್ಥರು, ರಸ್ತೆ ಬದಿಯಲ್ಲಿರುವ ನಿರ್ಗತಿಕರ ಪಾಲಿಗೆ ನಂದಾ ದೀಪವಾಗಿದ್ದಾರೆ.. ಅನಾಥರ ಬದುಕಿನಲ್ಲಿ ನಿಜವಾದ ಹೊಸಬೆಳಕನ್ನೇ ತಂದಿದ್ದಾರೆ.. ಅವರೆಲ್ಲರಿಗೂ ಆಶ್ರಯವನ್ನ ಒದಗಿಸುವಂತಹ ಮಹತ್ಕಾರ್ಯವನ್ನ ಮಾಡುತ್ತಿದ್ದಾರೆ.. ತಮ್ಮ ಆಶ್ರಮದಲ್ಲಿ ಇರುವ ಪ್ರತಿಯೊಬ್ಬರನ್ನ ಕೂಡ ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುವ ತನುಲಾ ಅವರದ್ದು ನಿಜವಾದ ಮಾತೃಹೃದಯ.. ಅಲ್ಲಿ ಸ್ವತಃ ತಾವೇ ಅಡುಗೆ ಮಾಡುತ್ತಾರೆ.. ಎಲ್ಲರಿಗೂ ಬಡಿಸುತ್ತಾರೆ.. ಯಾವುದೇ ಅಪಘಾತದ ಸುದ್ದಿ ತಿಳಿದರೆ ಇವರೇ ಆ್ಯಂಬುಲೆನ್ಸ್​ ತೆಗೆದುಕೊಂಡು ಹೋಗುತ್ತಾರೆ.. ಆಶ್ರಮದಲ್ಲಿರುವ ಗೋವುಗಳ ಪಾಲನೆಯನ್ನೂ ಮಾಡುತ್ತಾರೆ.. ತಮ್ಮವರನ್ನ ಕಳೆದುಕೊಂಡು ಅನಾಥಾಶ್ರಮಕ್ಕೆ ಬರುವವರನ್ನ ಮರಳಿ ತಮ್ಮ ಮನೆಗೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.. ಯಾವದೇ ಜಾತಿ ಧರ್ಮದ ಬೇದವಿಲ್ಲದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ತನುಲಾ ತರುಣ್​ ಅವರೇ ಇಂದಿನ ನಮ್ಮ ಬಾಹುಬಲಿ..

 

Latest article