Tuesday, October 26, 2021

ಸುಳ್ಳು ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ದಿನೇಶ್​ ಗುಂಡೂರಾವ್

Must read

ಬೆಂಗಳೂರು: ಸುಳ್ಳು ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಫಾಲ್ಸ್ ಪ್ರೊಪಗಂಡ ಹಾಗೂ ಸುಳ್ಳು ಬಿಜೆಪಿಯ ಬಂಡವಾಳ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್​ ಮಾಡಿರುವ ಅವರು, ಸದ್ಯದ ತೈಲಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ಕಟ್ಟುಕಥೆ ಕಟ್ಟುತ್ತಿರುವ ಬಿಜೆಪಿ, ದೇಶದ ಜನರನ್ನು ಕುರಿಮಂದೆ ಎಂದು ಭಾವಿಸಿದಂತಿದೆ. ಆದರೆ, ದೇಶದ ಜನ, ಬಿಜೆಪಿಯವರು ತಿಳಿದುಕೊಂಡಷ್ಟು ಮೂರ್ಖರಲ್ಲ. ಬೊಮ್ಮಾಯಿಯವರು ಅಧಿವೇಶನದಲ್ಲಿ ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದರು. ಬೆಲೆಯೇರಿಕೆಯ ನಡುವೆಯೂ ಸರ್ಕಾರ ಸಾಧನೆ ಮಾಡಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಕಳೆದ 7 ತಿಂಗಳಿನಿಂದ ಕೇಂದ್ರ ಉಚಿತ ಅಕ್ಕಿ ಕೊಡುತ್ತಿದೆ ಎಂಬ ಅಂಶ ಪ್ರಸ್ತಾಪಿಸಿದ್ದರು. ಆದರೆ, ಬೊಮ್ಮಾಯಿಯವರಿಗೆ ಆ ಉಚಿತ ಅಕ್ಕಿಯೊಳಗಿನ ಗುಟ್ಟು ಗೊತ್ತಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ,ರಾಜ್ಯದ ಜಿಎಸ್​ಟಿ ಪಾಲಲ್ಲೂ ವಂಚಿಸಿದೆ, ಹೆಚ್ಚುವರಿ ಅಬಕಾರಿ ಸುಂಕದಲ್ಲೂ ವಂಚಿಸುತ್ತಿದೆ. ತಿಂಗಳಿಗೊಮ್ಮೆ ದೆಹಲಿಗೆ ಟ್ರಿಪ್ ಮಾಡುವ ಬೊಮ್ಮಾಯಿಯವರಿಗೆ ಕೇಂದ್ರದ ಬಳಿ ರಾಜ್ಯದ ನ್ಯಾಯಯುತ ಪಾಲು ಕೇಳಲು ಬೆನ್ನುಹುರಿಯೇ ಇಲ್ಲ. ಪಾಲು ಕೇಳಿ ಅಂದರೆ ಸಾಲ ಕೇಳಿ ಬರುವ ಬೊಮ್ಮಾಯಿಯವರು ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುವುದು ಈ ನಾಡಿನ ದುರಂತ.

Also read:  ನಾಡಿನೆಲ್ಲೆಡೆ ಆಯುಧಪೂಜೆ ಸಂಭ್ರಮ: ಸಾಂಸ್ಕೃತಿಕ ನಗರಿಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭ

ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ಭಾರತ 30 ಮಿ.ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಮಾಡಿಕೊಳ್ಳಬೇಕು. ಆದರೆ, ದೇಶದಲ್ಲಿ 100 ಮಿ.ಮೆಟ್ರಿಕ್ ಟನ್ ಬಫರ್ ಸ್ಟಾಕ್ ಇದೆ. ಹೀಗೆ ಹೆಚ್ಚುವರಿಯಾಗಿ ಸಂಗ್ರಹವಾದ ಅಕ್ಕಿ ಕೊಳೆತು ಹೋಗುತ್ತಿದ್ದರೆ,‌ ಮತ್ತೊಂದು ಕಡೆ ಕೇಂದ್ರ ಎಥನಾಲ್ ಉತ್ಪಾದಿಸಲು ಈ ಅಕ್ಕಿಯನ್ನು ಕೆಜಿಗೆ 18 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಹೆಂಡ ಮಾಡಲು ಲಿಕ್ಕರ್ ಕಂಪನಿಗಳಿಗೆ ಅಕ್ಕಿ ಮಾರುವ ಕೇಂದ್ರಕ್ಕೆ ಆ ಅಕ್ಕಿಯನ್ನು ಬಡವರಿಗೆ ಕೊಡುವುದು ಕಷ್ಟವೇ? ಆಹಾರ ಭದ್ರತಾ ಕಾಯ್ದೆಯ ಪ್ರಕಾರ ದೇಶದ 92 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಬೇಕು. ಆದರೆ, ಸರ್ಕಾರ 2011ರ ಜನಗಣತಿ ಅನುಸಾರ 82 ಕೋಟಿ ಜನರಿಗೆ ಮಾತ್ರ ಅಕ್ಕಿ ವಿತರಿಸುತ್ತಿದೆ. ಉಳಿದ 12 ಕೋಟಿ ಜನರ ಅಕ್ಕಿ ಯಾರ ಹುಡಿಗೆ?.

Also read:  'ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವಲ್ಲ, ಯಡಿಯೂರಪ್ಪನವರ ಕುಟುಂಬದ ಸರ್ಕಾರ'

ಮೂಲ ಬಿಜೆಪಿಯವರಲ್ಲದ ಬೊಮ್ಮಾಯಿಯವರು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಬಿಜೆಪಿ ಸೇರಿ ಮನುಷತ್ವವನ್ನೂ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯ ನೈಜ ಕಾರಣ ಮುಚ್ಚಿಡುತ್ತಿದ್ದಾರೆ. ಇನ್ನಾದರೂ ಬೊಮ್ಮಾಯಿಯವರು ಮನುಷ್ಯ ಸಹಜ ಗುಣಗಳಿಂದ ವರ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

 

 

More articles

Latest article