Monday, November 29, 2021

ಮಾಜಿ ಶಾಸಕ ಬಿ.ನಂಜಾಮರಿ ಮನೆ ಹಾಗೂ ಅಂಗಡಿ ಮೇಲೆ ಐಟಿ ದಾಳಿ

Must read

ತುಮಕೂರು: ತಿಪಟೂರು ಮಾಜಿ ಶಾಸಕ ಬಿ.ನಂಜಾಮರಿ ಮನೆ ಹಾಗೂ ಅಂಗಡಿ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಧ್ಯಾಹ್ನದ ನಂತರ ಬಿ.ನಂಜಾಮರಿ ಅವರ ಅವರಕಸಬಾ ಹೋಬಳಿ ಬೆಳಗರಹಳ್ಳಿಯಲ್ಲಿರುವ ನಿವಾಸದ ಮೇಲೆ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಬಿ.ನಂಜಾಮರಿ ಆಪ್ತ ವರ್ತಕರ ಮನೆ ಹಾಗೂ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೊಬ್ಬರಿ ಅಂಗಡಿಯಲ್ಲೂ ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 15 ಅಧಿಕಾರಿಗಳ 60 ಸ್ಥಳದಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Latest article