Sunday, October 2, 2022

ನೆಹರು ಫೋಟೋ ಕೈಬಿಟ್ಟ ವಿಚಾರ: ಎಲ್ಲರ ಹೆಸರನ್ನೂ ಎಲ್ಲಾ ಕಡೆ ಹೇಳಲು ಆಗಲ್ಲ ಎಂದ ಹಾಲಪ್ಪ ಆಚಾರ್

Must read

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರ ಹರ್​ ಘರ್​ ತಿರಂಗಾ ಜಾಹಿರಾತಿನಲ್ಲಿ ಜವರಲಾಲ್ ನೆಹರು ಫೋಟೋ ಕೈ ಬಿಟ್ಟ ವಿಚಾರವಾಗಿ ಗಣಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರು ಅವರು ಗಾಂಧಿಯವರ ಜೊತೆ ಕೆಲಸ ಮಾಡಿದ್ದಾರೆ. ಎಲ್ಲರ ಹೆಸರನ್ನೂ ಎಲ್ಲ ಕಡೆ ಹೇಳಲು ಆಗುವುದಿಲ್ಲ. ಗಾಂಧಿ ಹೆಸರು ಹೇಳಿದರೆ ಅಲ್ಲಿ ಎಲ್ಲರೂ ಬರುತ್ತಾರೆ. ಎಲ್ಲರ ಹೆಸರನ್ನೂ ಬೆರಳು ಮಾಡಿ ಹೇಳಲು ಆಗುವುದಿಲ್ಲ ಎಂದಿದ್ದಾರೆ.

ಇನ್ನು ಉದ್ದೇಶಪೂರ್ವಕವಾಗಿ ನೆಹರು ಹೆಸರು ಬಿಟ್ಟಿದ್ದಾರೆಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಹಾಗೆ ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಅದಕ್ಕೇನು ಮಾಡಲು ಆಗುವುದಿಲ್ಲ. ವೈಯಕ್ತಿಕವಾಗಿ ಒಬ್ಬೊಬ್ಬರನ್ನು ಅಳೆಯಲು ಆಗುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರೂ ಮಹನೀಯರು. ಎಲ್ಲರ ಹೆಸರು ಪಡೆಯಲು ಆಗುವುದಿಲ್ಲ. ಒಬ್ಬೊಬ್ಬರನ್ನೇ ಗುರುತಿಸಿ ಆ ಪಕ್ಷದವರು ಈ ಪಕ್ಷದವರು ಅಂತಾ ಗುರುತಿಸಲು ಆಗಲ್ಲ ಎಂದರು.

Latest article