Monday, November 29, 2021

ಬೆಲ್ಟ್​ನಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ: ಆರೋಪಿ ಅರೆಸ್ಟ್​

Must read

ಹುಬ್ಬಳ್ಳಿ: ಅಕ್ರಮ ಚಿನ್ನ ಸಾಗಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇಶ್ವಾಪುರ ಚೇತನ್ ಬಂಧಿತ ಆರೋಪಿ.

ಆರೋಪಿ ಚೇತನ್​ ಹುಬ್ಬಳ್ಳಿಯ ಗಿರಣಿಚಾಳ ಬಳಿ ತನ್ನ ಬೆಲ್ಟ್​ನಲ್ಲಿ ಚಿನ್ನ ಇರಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಈ ವೇಳೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಅಲ್ಲದೇ ಬಂಧಿತ ಆರೋಪಿಯಿಂದ ₹38 ಲಕ್ಷ ಮೌಲ್ಯದ 804 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article