Thursday, January 27, 2022

ಬೆಂಗಳೂರಿನಲ್ಲಿ ಹಿಟಾಚಿಗೆ ಹರಿದು ಮೂರು ವರ್ಷದ ಮಗು ಸಾವು

Must read

ಬೆಂಗಳೂರು: ಹಿಟಾಚಿಗೆ ಹರಿದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಬಳಿಯ ಧನ್ವಂತರಿ ರಸ್ತೆಯಲ್ಲಿ ನಡೆದಿದೆ.

ಸಿಮಿಯಾನ್ (3) ಮೃತ ಮಗು. ಇಂದು ಬೆಳಗ್ಗೆ ತಂದೆಯ ಜೊತೆ ಮಗು ಹೊರಗೆ ಬಂದಿತ್ತು. ಈ ವೇಳೆ ಹಿಟಾಚಿ ಆಪರೇಟರ್​ ವಾಹನವನ್ನು ರಿವರ್ಸ್ ತೆಗೆಯುತ್ತಿದ್ದ. ಮಗು ಬಂದದ್ದನ್ನು ಗಮನಿಸದೇ ಆಕೆಯ ಮೇಲೆ ಹಿಟಾಚಿ ಹರಿಸಿದ್ದಾನೆ.

ಪರಿಣಾಮ ಸಿಮಿಯಾನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Latest article