Monday, November 29, 2021

ಸಿದ್ದರಾಮಯ್ಯ, ಹೆಚ್​ಡಿಕೆ ನಡುವೆ ಅಲ್ಪಸಂಖ್ಯಾತ ಮತಗಳಿಗೆ ಸ್ಪರ್ಧೆ: ಆರಗ ಜ್ಞಾನೇಂದ್ರ

Must read

ಬೆಂಗಳೂರು: ಸಿದ್ದರಾಮಯ್ಯ, ಹೆಚ್​ಡಿಕೆ ನಡುವೆ ಅಲ್ಪಸಂಖ್ಯಾತ ಮತಗಳಿಗೆ ಸ್ಪರ್ಧೆ ‌ನಡೆದಿದೆ. ಹೀಗಾಗಿ, ಆರ್​ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಹೆಚ್​ಡಿಕೆ ಹಲ್ಲು ಗಿಂಜುತ್ತಿದ್ದಾರೆ. ಅವರಿಬ್ಬರ ನಡುವೆ ಆರ್​ಎಸ್​ಎಸ್​ ತೆಗಳುವ ಸ್ಪರ್ಧೆ ನಡೆದಿದೆ. ಆರ್​ಎಸ್​ಎಸ್ ಒಳ್ಳೆಯದು ಅಂತ ಅವರಿಗೂ ಗೊತ್ತಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಒಲಿಸಿಕೊಳ್ಳಲು‌ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಪೊಲೀಸ್​ ವಸತಿಗೃಹ ಹಳೆಯದೆಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಹಳೆಯ ಕಟ್ಟಡಗಳನ್ನು ಕೆಡವಬೇಕು. ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು. ಹೊಸದಾಗಿ 10,000 ಪೊಲೀಸ್​ ಕ್ವಾಟ್ರಸ್​ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಸಹ ಮುಗಿದಿದೆ. ಹೊಸ ಕಟ್ಟಡ ನಿರ್ಮಾಣದ ನಂತರ ಸಮಸ್ಯೆ ಪರಿಹಾರವಾಗಲಿದೆ ಎಂದರು.

Latest article