Monday, November 29, 2021

ಬೃಹತ್ ಗಾತ್ರದ ಆನೆಯನ್ನೇ ಕೊಲ್ಲುವಷ್ಟು ವಿಷ ಈ ಹಾವಿನಲ್ಲಿದೆ

Must read

ನಾವು ಪ್ರಪಂಚದ ಅತ್ಯಂತ ಮಾರಕ ಜಾತಿಗಳಲ್ಲಿ ಒಂದಾದ ಹಾವುಗಳ ಬಗ್ಗೆ ನೋಡೋಣ. ಜಗತ್ತಿನಾದ್ಯಂತ 3,000 ಹಾವುಗಳಿವೆ ಆ 3,000 ಪ್ರಬೇದಗಳಲ್ಲಿ, ಕೇವಲ 400 ಮಾತ್ರ ವಿಶೇಷವಾಗಿ ವಿಷಪೂರಿತವಾಗಿದೆ ಮತ್ತು ಆ 400 ರಲ್ಲಿ ಇನ್ನೂ ಬೆರಳೆಣಿಕೆಯ ಪ್ರಬೇದಗಳು ಮನುಷ್ಯರಿಗೆ ನಂಬಲಾಗದಷ್ಟು ಮಾರಕವಾಗಿದೆ. ನೀವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲಾ ವಿಷಪೂರಿತ ಹಾವುಗಳು ಜೀವಕ್ಕೆ ಮಾರಕವಾಗಲಾರದು ಇಲ್ಲಿಯೂ ಅಪಾಯಕಾರಿ ಹಾವುಗಳು ಮತ್ತು ಜೀವಕ್ಕೆ ಮಾರಕವಾಗುವ ಹಾವುಗಳೆಂದು ವಿಂಗಡಿಸಲಾಗುತ್ತದೆ.

ಕಿಂಗ್ ಕೋಬ್ರಾ
ಏಷ್ಯಾದಾದ್ಯಂತ ಮತ್ತು ಭಾರತದ ಕಾಡುಗಳಲ್ಲಿ, ನೀವು ಕಿಂಗ್ ಕೋಬ್ರಾವನ್ನು ಕಾಣುತ್ತೀರಿ – ವಿಶ್ವದ ಅತಿ ಉದ್ದದ, ಅತ್ಯಂತ ವಿಷಕಾರಿ ಹಾವು18.8 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲ ಇದು ನಿಜವಾದ ನಾಗರಹಾವು ಅಲ್ಲ . ಬದಲಾಗಿ ಅದು ಅದರ ಉಪಪ್ರಬೇದಕ್ಕೆ ಸೇರುತ್ತದೆ ಈ ಪ್ರಭೇದ ವಿಷಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಕಿಂಗ್ ಕೋಬ್ರಾಗಳು ಸಾಮಾನ್ಯವಾಗಿ ಮನುಷ್ಯರಿಗೆ ಮಾರಕವಲ್ಲ ಯಾಕೆಂದರೆ ಇದು ಸಾಮಾನ್ಯವಾಗಿ ಹಲ್ಲಿಗಳು, ದಂಶಕಗಳು ಮತ್ತು ಇತರ ಹಾವುಗಳನ್ನು ಬೇಟೆಯಾಡುತ್ತಾರೆ. ಆದಾಗ್ಯೂ, ಈ ತಳಿ ತನ್ನ ವಿಷದಲ್ಲಿ ಸಾಕಷ್ಟು ನ್ಯೂರೋಟಾಕ್ಸಿನ್ ಅನ್ನು ಹೊಂದಿದ್ದು, ಕೆಲವೇ ಗಂಟೆಗಳಲ್ಲಿ ಬೃಹತ್ ಗಾತ್ರದ ಆನೆಯನ್ನೇ ಪಾರ್ಶ್ವವಾಯುವಿಗೆ ತಳ್ಳುವ ಅಥವಾ ಕೊಲ್ಲಲು ಸಹಾಯಮಾಡುತ್ತದೆ . ಇನ್ನೇನಾದರೂ ಮನುಷ್ಯನನ್ನು ಕಚ್ಚಿದರೆ, ಬದುಕುಳಿಯುವಿಕೆಯ ಪ್ರಮಾಣ ಸುಮಾರು 40 ಪ್ರತಿಶತವಷ್ಟೇ.

Latest article