Thursday, January 20, 2022

ಅತಿ ವೇಗದಿಂದ ಮರಕ್ಕೆ ಗುದ್ದಿದ ಕಾರು: ಭೀಕರ ಅಪಘಾತದಲ್ಲಿ ಇಂಜಿನಿಯರ್ ಲಾಯರ್ ಸೇರಿ ಸ್ಥಳದಲ್ಲೇ ನಾಲ್ವರ ಸಾವು

Must read

ಕರೀಂನಗರ: ಮಣಕೊಂಡೂರು ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಖಮ್ಮಂ ಕಡೆಯಿಂದ ಕರೀಂನಗರ ಕಡೆಗೆ ತೆರಳುತ್ತಿದ್ದ ಕಾರೊಂದು ಮಣಕೊಂಡೂರು ಪೊಲೀಸ್ ಠಾಣೆ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಕೊಪ್ಪುಳ ಬಾಲಾಜಿ ಶ್ರೀಧರ್, ಕೊಪ್ಪುಳ ಶ್ರೀನಿವಾಸ್ ರಾವ್, ಶ್ರೀಧರ್ ಹಾಗೂ ಕಾರು ಚಾಲಕ ಹಿಂದುರಿ ಜಲಂದರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೆಂಚಲ ಶ್ರೀನಿವಾಸ್ ರಾವ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕರೀಂನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಿವಾಸ್ ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯಲ್ಲಿ ಪಂಚಾಯತ್‌ರಾಜ್ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಬಾಲಾಜಿ ಶ್ರೀಧರ್ ಪೆದ್ದಪಲ್ಲಿ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಕರೀಂನಗರ ಪಟ್ಟಣದ ಜ್ಯೋತಿನಗರ ನಿವಾಸಿಗಳಾದ ಇವರು ಸಮಾರಂಭವೊಂದರಲ್ಲಿ ಭಾಗವಹಿಸಲು ಖಮ್ಮಂ ಜಿಲ್ಲೆಯ ಕಲ್ಲೂರುಗೆ ಹೋಗಿ ಕರೀಂನಗರಕ್ಕೆ ಹಿಂತಿರುಗುವಾಗ ಅಪಘಾತಕ್ಕೀಡಾಗಿದ್ದಾರೆ.

ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕರೀಂನಗರ ಆಸ್ಪತ್ರೆಗೆ ಶವಗಳನ್ನು ರವಾನಿಸಿದ್ದಾರೆ.

Latest article